ADVERTISEMENT

ಸಿಂಗಪುರ ಅಧ್ಯಕ್ಷರಾಗಿ ಭಾರತ ಮೂಲದ ಥರ್ಮನ್‌ ಷಣ್ಮುಗರತ್ನಂ ಆಯ್ಕೆ

ಪಿಟಿಐ
Published 1 ಸೆಪ್ಟೆಂಬರ್ 2023, 20:48 IST
Last Updated 1 ಸೆಪ್ಟೆಂಬರ್ 2023, 20:48 IST
ಥರ್ಮನ್‌ ಷಣ್ಮುಗರತ್ನಂ
ಥರ್ಮನ್‌ ಷಣ್ಮುಗರತ್ನಂ   

ಸಿಂಗಪುರ: ಭಾರತ ಮೂಲದ, ಸಿಂಗಪುರದ ಆರ್ಥಿಕ ತಜ್ಞ ಥರ್ಮನ್‌ ಷಣ್ಮುಗರತ್ನಂ ಅವರು ಸಿಂಗ‍ಪುರದ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು. 

66 ವರ್ಷ ವಯಸ್ಸಿನ ಮಾಜಿ ಸಚಿವರೂ ಆದ ಥರ್ಮನ್‌ ಅವರು ಶೇ 70.4ರಷ್ಟು ಅಂದರೆ 17.46 ಲಕ್ಷ ಮತಗಳನ್ನು ಪಡೆದರು. ಒಟ್ಟು 20.28 ಲಕ್ಷ ಮತಗಳು ಚಲಾವಣೆಯಾಗಿದ್ದವು. 

ಕಣದಲ್ಲಿದ್ದ ಚೀನಾ ಮೂಲದ ಕೊಕ್‌ ಸೊಂಗ್ ಮತ್ತು ತನ್‌ ಕಿನ್‌ ಲಿಯನ್ ಅವರು ಕ್ರಮವಾಗಿ ಶೇ 15.72 ಹಾಗೂ ಶೇ 13.88ರಷ್ಟು ಮತ ಪಡೆದರು.

ADVERTISEMENT

ಚುನಾವಣಾಧಿಕಾರಿ ತನ್‌ ಮೆಂಗ್ ದುಯಿ ತಡರಾತ್ರಿ ಫಲಿತಾಂಶವನ್ನು ಪ್ರಕಟಿಸಿದರು. ಥರ್ಮನ್ ಅವರು ಸಿಂಗಪುರದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಭಾರತ ಮೂಲದ ಮೂರನೆಯವರು. 2011ರ ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ.

ಪ್ರಧಾನಮಂತ್ರಿ ಲೀ ಸೀನ್ ಲೂಂಗ್ ಅವರು ಥರ್ಮನ್‌ ಅವರಿಗೆ ಶುಭ ಕೋರಿದ್ದಾರೆ. ಥರ್ಮನ್‌ ಅವರು 2011ರಿಂದ 2019ರ ಅವಧಿಯಲ್ಲಿ ಸಿಂಗಪುರದ ಉಪ ಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.