ADVERTISEMENT

ಹೆಲಿಕಾಪ್ಟರ್‌ ಅಪಘಾತ: ಪಾಕಿಸ್ತಾನದ ಶಾಂತಿ ಪಾಲಕರು ಸೇರಿ 14 ಮಂದಿ ಸಾವು

ಪಿಟಿಐ
Published 30 ಮಾರ್ಚ್ 2022, 14:05 IST
Last Updated 30 ಮಾರ್ಚ್ 2022, 14:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಕಾಂಗೋದಲ್ಲಿ ಶಾಂತಿ ಸ್ಥಾಪಿಸುವ ಸಂಬಂಧ ವಿಶ್ವಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಾಚರಣೆ ವೇಳೆ ಸಂಭವಿಸಿದ ಹೆಲಿಕಾಪ್ಟರ್‌ ಅಪಘಾತದಲ್ಲಿ ಪಾಕಿಸ್ತಾನದ ಆರು ಸೈನಿಕರು ಮತ್ತು ವಿಶ್ವಸಂಸ್ಥೆಯ ಎಂಟು ಶಾಂತಿ ಪಾಲಕರು ಸೇರಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಕಚೇರಿ ತಿಳಿಸಿದೆ.

ಶಾಂತಿಪಾಲನೆ ಕರ್ತವ್ಯಕ್ಕೆ ವಿಶ್ವಸಂಸ್ಥೆಯೊಂದಿಗೆ ಪಾಕಿಸ್ತಾನ ಸೇನಾ ಪಡೆಯ ಹೆಲಿಕಾಪ್ಟರ್‌ ಅನ್ನು ನಿಯೋಜಿಸಲಾಗಿತ್ತು. ಮಾರ್ಚ್‌ 29ರಂದು ಕಾರ್ಯಾಚರಣೆ ನಡೆಸುವ ವೇಳೆ ಈ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಶ್ವಸಂಸ್ಥೆಯ ಎಂಟು ಹಾಗೂ ಪಾಕಿಸ್ತಾನದ ಆರು ಮಂದಿ ಶಾಂತಿ ಪಾಲಕರಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ. ದುರಂತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ದುರ್ಘಟನೆಯಲ್ಲಿ ಮಡಿದವರಿಗೆ ಪಾಕಿಸ್ತಾನದ ಪ್ರಧಾನಮಂತ್ರಿ ಕಾರ್ಯಾಲಯವು ಸಂತಾಪ ಸೂಚಿಸಿದೆ.ಇದುವರೆಗೆ ಶಾಂತಿ ಪಾಲನೆ ಕಾರ್ಯಾಚರಣೆಯ ಕರ್ತವ್ಯದ ಸಮಯದಲ್ಲಿ ಪಾಕಿಸ್ತಾನದ 157 ಶಾಂತಿ ಪಾಲಕರು ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.