ADVERTISEMENT

ಕೋವಿಡ್ 19 | ಕಾಮನ್‌ಸೆನ್ಸ್‌ ಬಳಸಿ ಬಚಾವಾಗಿ: ಒಬಾಮಾ ಕಿವಿಮಾತು

ಏಜೆನ್ಸೀಸ್
Published 5 ಮಾರ್ಚ್ 2020, 2:33 IST
Last Updated 5 ಮಾರ್ಚ್ 2020, 2:33 IST
ಬರಾಕ್ ಒಬಾಮಾ
ಬರಾಕ್ ಒಬಾಮಾ   

ವಾಷಿಂಗ್‌ಟನ್: ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಕೋವಿಡ್ 19 (ಕೊರೊನಾ ವೈರಸ್) ಬಗ್ಗೆ ಪ್ರತಿಕ್ರಿಯಿಸಿರುವಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ‘ಕಾಮನ್‌ಸೆನ್ಸ್‌ ಬಳಸಿ ಬಚಾವಾಗಿ’ ಎಂದು ಕಿವಿಮಾತು ಹೇಳಿದ್ದಾರೆ.

‘ಕೈ ಚೆನ್ನಾಗಿ ತೊಳೆದುಕೊಳ್ಳುವುದರ ಕಡೆಗೆ ಗಮನಕೊಡಿ. ಮಾಸ್ಕ್‌ಗಳನ್ನು (ಮುಖಗವಸು) ಕೊಳ್ಳಲು ಮುಗಿಬೀಳಬೇಡಿ. ಅವುಆರೋಗ್ಯ ಕಾರ್ಯಕರ್ತರಿಗೆ ಮೀಸಲಿರಲಿ. ತಜ್ಞರ ಮಾತನ್ನು ಕೇಳಿ, ಅರ್ಥ ಮಾಡಿಕೊಳ್ಳಿ ಮತ್ತು ಅನುಸರಿಸಿ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಧಾನವಾಗಿರಿ, ಗಾಬರಿಪಡಬೇಡಿ’ ಎಂದು ಒಬಾಮಾ ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

ರೋಗ ನಿಯಂತ್ರಣ ಕೇಂದ್ರಗಳು ನೀಡುವ ಅಪ್‌ಡೇಟ್‌ಗಳ ಕಡೆಗೆ ಗಮನಕೊಡಿ. ಹುಷಾರಿಲ್ಲ ಎಂದರೆ ಮನೆಯಲ್ಲೇ ಇರಿ ಎಂದು ಒಬಾಮಾ ಹೇಳಿದ್ದಾರೆ.

ADVERTISEMENT

ಮಾಸ್ಕ್‌ಗಳಿಗೆ ಏಕಾಏಕಿ ಬೇಡಿಕೆ ಹೆಚ್ಚಾದ ಕಾರಣ ಆರೋಗ್ಯ ಕಾರ್ಯಕರ್ತರಿಗೆ ಅವುಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹಿನ್ನೆಲೆಯಲ್ಲಿ ಒಬಾಮಾ ಹೇಳಿಕೆ ಮಹತ್ವ ಪಡೆದಿದೆ.

ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಅಮೆರಿಕದಲ್ಲಿ ಬುಧವಾರ 11ಕ್ಕೆ ಏರಿದೆ. ಒಟ್ಟು 130 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕು ಹರಡುವನ್ನು ತಡೆಗಟ್ಟಲು ಅಮೆರಿಕದ ಕಾಂಗ್ರೆಸ್‌ 8 ಶತಕೋಟಿ ಡಾಲರ್‌ ನೀಡಲು ಒಪ್ಪಿಕೊಂಡಿತ್ತು. 2017ರಲ್ಲಿ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದ ನಂತರ ಒಬಾಮಾ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.