ADVERTISEMENT

ಸೊಮಾಲಿಯಾ: ಕಾರು ಬಾಂಬ್‌ಸ್ಫೋಟ: 100 ಮಂದಿ ಬಲಿ

ಏಜೆನ್ಸೀಸ್
Published 30 ಅಕ್ಟೋಬರ್ 2022, 13:57 IST
Last Updated 30 ಅಕ್ಟೋಬರ್ 2022, 13:57 IST
ಸೋಮಾಲಿಯಾದ ಮೊಗದಿಶುವಿನಲ್ಲಿ ಶನಿವಾರ ನಡೆದ ಕಾರ್‌ ಬಾಂಬ್‌ ದಾಳಿಯಿಂದ ಹಾನಿಯಾದ ಕಟ್ಟಡ –ಎಪಿ ಚಿತ್ರ
ಸೋಮಾಲಿಯಾದ ಮೊಗದಿಶುವಿನಲ್ಲಿ ಶನಿವಾರ ನಡೆದ ಕಾರ್‌ ಬಾಂಬ್‌ ದಾಳಿಯಿಂದ ಹಾನಿಯಾದ ಕಟ್ಟಡ –ಎಪಿ ಚಿತ್ರ   

ಮೊಗದಿಶು (ಸೊಮಾಲಿಯಾ): ಸೊಮಾಲಿಯಾದ ರಾಜಧಾನಿ ಜನನಿಬಿಡ ಪ್ರದೇಶದಲ್ಲಿ ಶನಿವಾರ ನಡೆದ ಎರಡು ಕಾರ್‌ ಬಾಂಬ್‌ ಸ್ಫೋಟ ಕೃತ್ಯದಲ್ಲಿ ಕನಿಷ್ಠ 100 ಜನರು ಮೃತಪಟ್ಟಿದ್ದಾರೆ.

ದಾಳಿಯಲ್ಲಿ ಅಂದಾಜು 300 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ಅಧ್ಯಕ್ಷ ಹಸನ್‌ ಶೇಖ್‌ ಮೊಹಮುದ್‌ ತಿಳಿಸಿದ್ದಾರೆ.

ಇದೇ ಸ್ಥಳದಲ್ಲಿ 2017ರಲ್ಲಿ ಟ್ರಕ್‌ ಬಾಂಬ್ ಸ್ಫೋಟಗೊಂಡು 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಅಲ್‌ ಕೈದಾ ಜೊತೆ ಸಂಪರ್ಕದಲ್ಲಿರುವ ಅಲ್‌–ಶಬಾಬ್ ಉಗ್ರರ ಗುಂಪು ಈ ಕೃತ್ಯ ನಡೆಸಿದೆ ಎಂದು ಸರ್ಕಾರ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.