ದಕ್ಷಿಣ ಕೊರಿಯಾದ ನೂತನ ಲೀ ಜೆ ಮಯುಂಗ್
ರಾಯಿಟರ್ಸ್ ಚಿತ್ರ
ನವದೆಹಲಿ: ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷರಾಗಿ ಲೀ ಜೆ ಮಯುಂಗ್ ಆಯ್ಕೆಯಾಗಿದ್ದಾರೆ. ಲೀ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ರಿಪಬ್ಲಿಕ್ ಕೊರಿಯಾದ ನೂತನ ಅಧ್ಯಕ್ಷರಾಗಿರುವ ಲೀ ಅವರಿಗೆ ಅಭಿನಂದನೆಗಳು. ಭಾರತ-ಆರ್‌ಒಕೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ರಿಪಬ್ಲಿಕ್ ಕೊರಿಯಾದಲ್ಲಿ ಉಂಟಾಗುತ್ತಿದ್ದ ರಾಜಕೀಯ ಗೊಂದಲಗಳ ನಡುವೆ ಲಿಬರಲ್ ವಿರೋಧ ಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಲೀ ಜೆ ಮಯುಂಗ್ ಅಧ್ಯಕ್ಷರಾಗಿ ಆಯ್ಕೆಯಾದರು, ಈ ಗೆಲುವು ಪದಚ್ಯುತಗೊಂಡ ಸಂಪ್ರದಾಯವಾದಿ ನಾಯಕ ಯೂನ್ ಸುಕ್ ಯಿಯೋಲ್ ಅವರು ಹೇರಿದ ಮಾರ್ಷಲ್ ಕಾನೂನಿನ ಮೇಲೆ ಆಘಾತಕಾರಿ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.