ADVERTISEMENT

ವಿದ್ಯುತ್‌ ವ್ಯತ್ಯಯ: ಕತ್ತಲಲ್ಲಿ ಸ್ಪೇನ್‌, ಪೋರ್ಚುಗಲ್‌

ಸ್ಥಗಿತಗೊಂಡ ಮೆಟ್ರೊ ಸಂಚಾರ | ಎಟಿಎಂ, ಬ್ಯಾಂಕ್‌ಗಳಲ್ಲಿ ವಹಿವಾಟು ಸ್ಥಗಿತ

ಏಜೆನ್ಸೀಸ್
Published 28 ಏಪ್ರಿಲ್ 2025, 23:10 IST
Last Updated 28 ಏಪ್ರಿಲ್ 2025, 23:10 IST
<div class="paragraphs"><p>ವಿದ್ಯುತ್ ವ್ಯತ್ಯಯದಿಂದ ಸಂಚಾರಿ ದೀಪಗಳು ಕಾರ್ಯನಿರ್ವಹಿಸದ ಕಾರಣ ಸ್ಪೇನ್‌, ಫ್ರಾನ್ಸ್‌ನ ಗಡಿಭಾಗ ಐಬೇರಿಯನ್‌ ದ್ವೀಪದಲ್ಲಿ ರಸ್ತೆಯಲ್ಲಿ ನಿಂತ ವಾಹನಗಳು</p></div>

ವಿದ್ಯುತ್ ವ್ಯತ್ಯಯದಿಂದ ಸಂಚಾರಿ ದೀಪಗಳು ಕಾರ್ಯನಿರ್ವಹಿಸದ ಕಾರಣ ಸ್ಪೇನ್‌, ಫ್ರಾನ್ಸ್‌ನ ಗಡಿಭಾಗ ಐಬೇರಿಯನ್‌ ದ್ವೀಪದಲ್ಲಿ ರಸ್ತೆಯಲ್ಲಿ ನಿಂತ ವಾಹನಗಳು

   

ಬಾರ್ಸಿಲೋನಾ: ಸ್ಪೇನ್‌ ಹಾಗೂ ಪೋರ್ಚುಗಲ್‌ನಲ್ಲಿ ಸೋಮವಾರ ವಿದ್ಯುತ್‌ ಸಂಪರ್ಕದಲ್ಲಿ ಭಾರಿ ವ್ಯತ್ಯಯ ಉಂಟಾಯಿತು. ಇದರಿಂದ ಮೆಟ್ರೊ ರೈಲು ಸಂಪರ್ಕ, ಫೋನ್‌ ಲೈನ್‌ಗಳು, ಸಂಚಾರ ದೀಪ ಹಾಗೂ ಎಟಿಎಂ ವಹಿವಾಟುಗಳು ಸ್ಥಗಿತಗೊಂಡಿದ್ದವು.

‘ದೇಶದ ಕಂಡುಬಂದ ಅತ್ಯಪರೂಪದ ವಿದ್ಯುತ್‌ ವ್ಯತ್ಯಯ ಪ್ರಕರಣ ಇದಾಗಿದೆ. ‘ಐಬೇರಿಯನ್‌ ದ್ವೀಪ ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದ್ದು, ಪ್ರಕರಣ ಕುರಿತು ಪರಿಶೀಲಿಸಲಾಗುತ್ತಿದೆ’
ಎಂದು ಸ್ಪೇನ್‌ನ ವಿದ್ಯುತ್‌ ಗ್ರಿಡ್‌ ಮೇಲ್ವಿಚಾರಣಾ ಕಂಪನಿ ‘ರೆಡ್‌ ಎಲೆಕ್ಟ್ರಿಕಾ’ ತಿಳಿಸಿದೆ. ಸ್ಪೇನ್‌ ದೇಶವು 5 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ವಿದ್ಯುತ್‌ ವ್ಯತ್ಯಯದಿಂದ ಎಷ್ಟು ಜನರು ತೊಂದರೆಗೆ ಒಳಗಾಗಿದ್ದಾರೆ ಎಂದು ಗೊತ್ತಾಗಿಲ್ಲ.

ADVERTISEMENT

‘ಸ್ಥಳೀಯ ಕಾಲಮಾನದಂತೆ, ಮಧ್ಯಾಹ್ನದ ನಂತರ ಏಕಾಏಕಿ ದೊಡ್ಡ ಪ್ರಮಾಣದ ವಿದ್ಯುತ್‌ ವ್ಯತ್ಯಯ ಉಂಟಾಯಿತು. ಇದರಿಂದ ಮ್ಯಾಡ್ರಿಡ್‌ ನಲ್ಲಿರುವ ಸಂಸತ್‌ ಕತ್ತಲಿನಲ್ಲಿ ಮುಳುಗಿತು. ದೇಶದಲ್ಲಿರುವ ಮೆಟ್ರೊ ಸಂಪರ್ಕ ಸಂಚಾರ ಕಡಿತಗೊಂಡು, ಜನರು ಕಗ್ಗತ್ತಲಿನಲ್ಲಿ ಕಂಗಾಲಾದರು’ ಎಂದು ಸ್ಪೇನ್‌ನ ಸರ್ಕಾರಿ ಸುದ್ದಿ ವಾಹಿನಿ ‘ಆರ್‌ಟಿವಿಇ’ ವರದಿ ಮಾಡಿದೆ. 

‘ಸೋಮವಾರ ಮಧ್ಯಾಹ್ನ 12.15ರ ವೇಳೆ ದೇಶದಲ್ಲಿ ವಿದ್ಯುತ್‌ ಬಳಕೆಯು 25 ಸಾವಿರ ಮೆಗಾವಾಟ್‌ನಿಂದ 12 ಸಾವಿರ ಮೆಗಾವಾಟ್‌ಗೆ ಇಳಿಕೆಯಾಗಿತ್ತು’ ಎಂದು ಸ್ಪೇನ್‌ನ ವಿದ್ಯುತ್‌ ಜಾಲದ ಜಾಲತಾಣದಲ್ಲಿ ದಾಖಲಾಗಿತ್ತು.

‘ಕೆಲವು ಗಂಟೆಗಳ ನಂತರ ಸ್ಪೇನ್‌ನ ಉತ್ತರ ಹಾಗೂ ದಕ್ಷಿಣ ದ್ವೀಪಗಳಲ್ಲಿ ಮತ್ತೆ ವಿದ್ಯುತ್‌ ಪೂರೈಕೆ ಆರಂಭಗೊಂಡಿದೆ. ಇಡೀ ದೇಶದಲ್ಲಿ ನಿಧಾನವಾಗಿ ಮತ್ತೆ ವಿದ್ಯುತ್‌ ಪೂರೈಕೆಯನ್ನು ಪುನರ್‌ ಸ್ಥಾಪಿಸಲಾಗುವುದು’ ಎಂದು ಜಾಲತಾಣ ತಿಳಿಸಿದೆ. 

1.6 ಕೋಟಿ ಜನಸಂಖ್ಯೆ ಹೊಂದಿರುವ ಪೋರ್ಚುಗಲ್‌ನ ರಾಜಧಾನಿ ಲಿಸ್ಬನ್‌ ಸೇರಿದಂತೆ ಸುತ್ತಲಿನ ಪ್ರದೇಶ, ಉತ್ತರ, ದಕ್ಷಿಣ ಪ್ರದೇಶಗಳಲ್ಲಿ ಸೋಮವಾರ ವಿದ್ಯುತ್‌ ವ್ಯತ್ಯಯ ಉಂಟಾಯಿತು.

‘ಸ್ಪೇನ್‌ನಿಂದ ಪೂರೈಕೆಯಾಗುವ ವಿತರಣಾ ಜಾಲದಲ್ಲಿ ಉಂಟಾದ ಸಮಸ್ಯೆಯಿಂದ ಎಲ್ಲೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿದೆ’ ಎಂದು ಸಂಪುಟ ಸಚಿವ ಲಿಟೊ ಅಮರೊ ತಿಳಿಸಿದರು.

ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.