ADVERTISEMENT

ಓಮೈಕ್ರಾನ್ ವಿರುದ್ಧ ಸ್ಪುಟ್ನಿಕ್–ವಿ ಲಸಿಕೆ ಪರಿಣಾಮಕಾರಿ: ರಷ್ಯಾ

ರಾಯಿಟರ್ಸ್
Published 17 ಡಿಸೆಂಬರ್ 2021, 12:47 IST
Last Updated 17 ಡಿಸೆಂಬರ್ 2021, 12:47 IST
ಸ್ಪುಟ್ನಿಕ್–ವಿ ಲಸಿಕೆ: ರಾಯಿಟರ್ಸ್‌ ಚಿತ್ರ
ಸ್ಪುಟ್ನಿಕ್–ವಿ ಲಸಿಕೆ: ರಾಯಿಟರ್ಸ್‌ ಚಿತ್ರ   

ಮಾಸ್ಕೊ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ವಿರುದ್ಧ ‘ಸ್ಪುಟ್ನಿಕ್–ವಿ’ ಲಸಿಕೆ ಪರಿಣಾಮಕಾರಿ ಎಂದು ರಷ್ಯಾದ ನೇರ ಹೂಡಿಕೆ ನಿಧಿ ಹೇಳಿದೆ.

‘ಸ್ಪುಟ್ನಿಕ್–ವಿ’ ಲಸಿಕೆಯು ಓಮೈಕ್ರಾನ್ ತಟಸ್ಥಗೊಳಿಸಬಲ್ಲ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ‘ಸ್ಪುಟ್ನಿಕ್ ಲೈಟ್’ ಬೂಸ್ಟರ್ ಡೋಸ್ ನೀಡುವ ಮೂಲಕ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಓಮೈಕ್ರಾನ್‌ ತಳಿಯನ್ನು ತಟಸ್ಥಗೊಳಿಸುವ ಹೆಚ್ಚಿನ ಶಕ್ತಿ ‘ಸ್ಪುಟ್ನಿಕ್–ವಿ’ ಲಸಿಕೆಗೆ ಇರುವುದನ್ನು ಗಮಾಲೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಲಸಿಕೆ ಪಡೆಯುವುದರಿಂದ ಸೋಂಕು ಉಲ್ಬಣಗೊಳ್ಳುವುದನ್ನು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.