ADVERTISEMENT

ಶ್ರೀಲಂಕಾದಲ್ಲಿ 11 ತೀವ್ರಗಾಮಿ ಸಂಘಟನೆಗಳಿಗೆ ನಿಷೇಧ

ವಿಶೇಷ ಅಧಿಸೂಚನೆ ಹೊರಡಿಸಿದ ಅಧ್ಯಕ್ಷ ಗೊಟಬಯ ರಾಜಪಕ್ಸೆ

ಪಿಟಿಐ
Published 14 ಏಪ್ರಿಲ್ 2021, 6:54 IST
Last Updated 14 ಏಪ್ರಿಲ್ 2021, 6:54 IST
ಗೊಟಬಯ ರಾಜಪಕ್ಸೆ
ಗೊಟಬಯ ರಾಜಪಕ್ಸೆ   

ಕೊಲಂಬೊ: ದೇಶದಲ್ಲಿ ಉಗ್ರರ ಚಟುವಟಿಕೆಗಳೊಂದಿಗೆ ಸಂಪರ್ಕವಿಟ್ಟುಕೊಂಡಿರುವ ಆರೋಪದ ಮೇಲೆ ಶ್ರೀಲಂಕಾ ಸರ್ಕಾರ, ಇಸ್ಲಾಮಿಕ್ ಸ್ಟೇಟ್‌ (ಐಎಸ್‌ಐಎಸ್‌) ಮತ್ತು ಅಲ್‌ ಖೈದಾ ಸೇರಿದಂತೆ ಹನ್ನೊಂದು ಇಸ್ಲಾಮಿಕ್ ಸಂಘಟನೆಗಳನ್ನು ನಿಷೇಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಮಂಗಳವಾರ ಹೊರಡಿಸಿರುವ ವಿಶೇಷ ಗೆಜೆಟ್ ಅಧಿಸೂಚನೆಯಲ್ಲಿ, ಭಯೋತ್ಪಾದನೆ ತಡೆ (ತಾತ್ಕಾಲಿಕ) ನಿಬಂಧನೆ ಕಾಯ್ದೆಯಡಿ ಈ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಿದ್ದಾರೆ. ಈ ಕಾಯ್ದೆ ಉಲ್ಲಂಘಿಸಿದರೆ ಅಥವಾ ಸಂಚುರೂಪಿಸುವಂತಹ ಕೃತ್ಯ ಎಸಗಿದರೆ ಅಂಥವರಿಗೆ 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ನಿಷೇಧಿತ ಸಂಸ್ಥೆಗಳಲ್ಲಿ ಶ್ರೀಲಂಕಾ ಇಸ್ಲಾಮಿಕ್ ವಿದ್ಯಾರ್ಥಿ ಚಳವಳಿ ಸೇರಿದಂತೆ ಸ್ಥಳೀಯ ಮುಸ್ಲಿಂ ಗುಂಪುಗಳೂ ಸೇರಿವೆ.

ADVERTISEMENT

2019ರಲ್ಲಿ ನಡೆದ ಈಸ್ಟರ್ ಸಂಡೆ ಆತ್ಮಾಹುತಿ ಬಾಂಬ್ ದಾಳಿಯ ನಂತರ, ಶ್ರೀಲಂಕಾ ಸ್ಥಳೀಯ ಜಿಹಾದಿ ಗುಂಪು ನ್ಯಾಷನಲ್ ಥೌಹೀತ್ ಜಮಾಥ್ (ಎನ್‌ಟಿಜೆ) ಮತ್ತು ಇತರ ಎರಡು ಸಂಘಟನೆಗಳನ್ನು ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.