ADVERTISEMENT

ಶ್ರೀಲಂಕಾ: ಸಂಸದರ ಪಿಂಚಣಿ ರದ್ದು

ಪಿಟಿಐ
Published 21 ಫೆಬ್ರುವರಿ 2026, 16:00 IST
Last Updated 21 ಫೆಬ್ರುವರಿ 2026, 16:00 IST
.
.   

ಕೊಲಂಬೊ: ಸಂಸದರ ಪಿಂಚಣಿ ರದ್ದುಗೊಳಿಸಿ ಶ್ರೀಲಂಕಾ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಅಧ್ಯಕ್ಷ ಅನುರಾ ಕುಮಾರ ಡಿಸ್ಸನಾಯಕೆ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಯನ್ನು ಈ ಮೂಲಕ ಈಡೇರಿಸಿದಂತಾಗಿದೆ.

ಐದು ವರ್ಷದ ಅವಧಿ ಪೂರ್ಣಗೊಳಿಸಿದ ಸಂಸದರಿಗೆ ಪಿಂಚಣಿ ಪಡೆಯುವ ಅರ್ಹತೆ ಇದೆ.

ADVERTISEMENT

ಶ್ರೀಲಂಕಾ ಸರ್ಕಾರವು ಸಂಸದರ ಪಿಂಚಣಿ (ರದ್ದತಿ) ಕಾಯ್ದೆಯನ್ನು ಮಂಗಳವಾರ ಬಹುಮತದೊಂದಿಗೆ ಅಂಗೀಕರಿಸಿತು. 225 ಸದಸ್ಯ ಬಲದ ಸಂಸತ್‌ನಲ್ಲಿ 154 ಮತಗಳಿಂದ ಮಸೂದೆ ಅಂಗೀಕರಿಸಲಾಯಿತು. ಇಬ್ಬರು ಸಂಸದರು ವಿರೋಧವಾಗಿ ಮತ ಚಲಾಯಿಸಿದರು. ಉಳಿದವರು ಗೈರಾಗಿದ್ದರು.

ಸಂಸದರ ಪಿಂಚಣಿ (ರದ್ದತಿ) ಮಸೂದೆಯನ್ನು ಸರಳ ಬಹುಮತದೊಂದಿಗೆ ಅಂಗೀಕರಿಸಬಹುದು ಎಂದು ಫೆ. 6ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.