ADVERTISEMENT

ಚೀನಾ ಪ್ರವಾಸಕ್ಕೆ ತೆರಳಿದ ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ

ಪಿಟಿಐ
Published 13 ಜನವರಿ 2025, 13:43 IST
Last Updated 13 ಜನವರಿ 2025, 13:43 IST
ಅನುರಾ ಕುಮಾರ ದಿಸ್ಸನಾಯಕೆ
ಅನುರಾ ಕುಮಾರ ದಿಸ್ಸನಾಯಕೆ   

ಕೊಲಂಬೊ: ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಸೋಮವಾರ ಚೀನಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಭೇಟಿಯ ವೇಳೆ ದಿಸ್ಸನಾಯಕೆ ಅವರು ಕ್ಸಿ ಅವರ ಜೊತೆ ಪರಸ್ಪರ ಆಸ್ತಕಿಯುಳ್ಳ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಚೀನಾದ ಪ್ರಧಾನಿ ಲಿ ಕಿಯಾಂಗ್‌ ಮತ್ತು ಚೀನಾದ ನ್ಯಾಷನಲ್‌ ಪೀಪಲ್‌ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯ ಅಧ್ಯಕ್ಷ ಝಾವೊ ಲೆಜಿ ಅವರನ್ನು ಭೇಟಿ ಮಾಡಲಿದ್ದಾರೆ.

‘ಈ ಭೇಟಿಯು ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.