ADVERTISEMENT

ಕೋವಿಡ್‌ ಲಸಿಕೆ ಖರೀದಿಗಾಗಿ ನೆರವು: ಐಎಂಎಫ್‌ ಮೊರೆ ಹೋದ ಶ್ರೀಲಂಕಾ

ಪಿಟಿಐ
Published 22 ಸೆಪ್ಟೆಂಬರ್ 2021, 10:51 IST
Last Updated 22 ಸೆಪ್ಟೆಂಬರ್ 2021, 10:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ: ಫೈಜರ್‌ ಕಂಪನಿ ಉತ್ಪಾದಿತ ಲಸಿಕೆಯ 1.4 ಕೋಟಿ ಡೋಸ್‌ ಖರೀದಿ ಹಾಗೂ ಲಸಿಕೆ ಕಾರ್ಯಕ್ರಮಗಳ ವೆಚ್ಚಗಳಿಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಯಿಂದ ₹738.77 ಕೋಟಿ (100 ಮಿಲಿಯನ್‌ ಡಾಲರ್‌) ಸಾಲ ಕೇಳಲು ಶ್ರೀಲಂಕಾ ನಿರ್ಧರಿಸಿದೆ.

‘ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಅವರು ‌'ಕೋವಿಡ್‌– 19 ನಿಯಂತ್ರಣದ ಕಾರ್ಯತಂತ್ರದ ಸಿದ್ಧತೆ' ಕಾರ್ಯಕ್ರಮದಡಿ ಸಾಲ ಪಡೆಯುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ‘ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಲಸಿಕೆ ಖರೀದಿ ಹಾಗೂ ಲಸಿಕಾ ಕಾರ್ಯಕ್ರಮಗಳ ವೆಚ್ಚಕ್ಕಾಗಿ ಹಣ ಮಂಜೂರು ಮಾಡಲು ಐಎಫ್ಎಫ್‌ ಸಮ್ಮತಿಸಿದೆ ಎಂದೂ ಸರ್ಕಾರ ತಿಳಿಸಿದೆ.

ADVERTISEMENT

ಔಷಧೀಯ ವ್ಯವಹಾರಗಳ ಸಚಿವ ಚನ್ನಾ ಜಯಸುಮನ ಅವರು ‘ದೇಶದ ಜನಸಂಖ್ಯೆ 2.1 ಕೋಟಿ ಪೈಕಿ, ಶೇ 50ರಷ್ಟು ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ’ ಎಂದು ಸಂಸತ್ತಿಗೆ ಮಂಗಳವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.