ADVERTISEMENT

43 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾದ ನೌಕಾಪಡೆ

ಪಿಟಿಐ
Published 19 ಡಿಸೆಂಬರ್ 2021, 11:07 IST
Last Updated 19 ಡಿಸೆಂಬರ್ 2021, 11:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ: ಶ್ರೀಲಂಕಾದ ನೌಕಾಪಡೆಯು ಕಡಲುಗಡಿಯನ್ನು ದಾಟಿ ಮೀನುಗಾರಿಕೆ ಮಾಡುತ್ತಿದ್ದ 43 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಆರು ಟ್ರಾಲರ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ.

ಜಾಫ್ನಾದಲ್ಲಿನ ಡೆಫ್ಟ್‌ ದ್ವೀಪ ಭಾಗದಲ್ಲಿ ಶನಿವಾರ ಇವರು ಮೀನುಗಾರಿಕೆ ಮಾಡುತ್ತಿದ್ದರು. ನೌಕಾಪಡೆಯ 4 ಎಫ್‌ಎಎಫ್‌ಗೆ ಸೇರಿದ ಕಾರ್ಯಪಡೆಯ ಸಿಬ್ಬಂದಿ ದಾಳಿ ನಡೆಸಿದರು. ಕೋವಿಡ್‌ನ ಮಾರ್ಗಸೂಚಿಯಂತೆ ಪರೀಕ್ಷೆ ಬಳಿಕ ಕಾನೂನು ಕ್ರಮಕ್ಕೆ ಸಂಬಂಧಿಸಿದವರಿಗೆ ಬಂಧಿತರನ್ನು ಒಪ್ಪಿಸಲಾಯಿತು ಎಂದು ಹೇಳಿಕೆ ತಿಳಿಸಿದೆ.

ಕಡಲುಗಡಿ ದಾಟಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಉಭಯ ದೇಶಗಳ ಮೀನುಗಾರರನ್ನು ಆಗಾಗ್ಗೆ ಬಂಧಿಸುವುದು ಸಾಮಾನ್ಯವಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ವಿಷಯದಲ್ಲಿಯೂ ತೊಡಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.