ADVERTISEMENT

ಶ್ರೀಲಂಕಾ : ಹೊಸ ಸರ್ಕಾರದ ಮೊದಲ ಸಂಸತ್ ಅಧಿವೇಶನ ಆ.20ಕ್ಕೆ

ಪಿಟಿಐ
Published 10 ಆಗಸ್ಟ್ 2020, 8:06 IST
Last Updated 10 ಆಗಸ್ಟ್ 2020, 8:06 IST
   

ಕೊಲಂಬೊ: ಶ್ರೀಲಂಕಾದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಜಪಕ್ಸೆ ಸಹೋದರರ ನೇತೃತ್ವ ಸರ್ಕಾರದ ಮೊದಲ ಸಂಸತ್ತಿನ ಅಧಿವೇಶನ ಆಗಸ್ಟ್‌ 20ರಂದು ನಡೆಯಲಿದೆ.

’ಕೋವಿಡ್‌ 19’ ಸೋಂಕು ನಿಯಂತ್ರಣ ’ಶಿಷ್ಟಾಚಾರ’ಗಳೊಂದಿಗೆ ಸಂಸತ್ತಿನ ಮೊದಲ ಅಧಿವೇಶನಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಶ್ರೀಲಂಕಾದಲ್ಲಿ 2844 ಸೋಂಕಿತ ಪ್ರಕರಣಗಳಿವೆ. 2579 ಮಂದಿ ಗುಣಮುಖರಾಗಿದ್ದಾರೆ. 11 ಮಂದಿ ಸಾವನ್ನಪ್ಪಿದ್ದಾರೆ.

ADVERTISEMENT

’ಸಂಸತ್‌ ಭವನದೊಳಗೆ ಸಂಸದರು ಕುಳಿತುಕೊಳ್ಳುವ ಆಸನಗಳ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಂಡಿದ್ದೇವೆ. ಪ್ರತಿಯೊಬ್ಬರಿಗೂ ಮಾಸ್ಕ್‌ ಧರಿಸಿ ಬರಲು ಸೂಚಿಸಲಾಗಿದೆ. ಈಗಾಗಲೇ ಸಂಸತ್‌ ಭವನದ ಎಲ್ಲ ಕೊಠಡಿಗಳನ್ನೂ ಸ್ಯಾನಿಟೈಸ್ ಮಾಡಲಾಗಿದೆ’ ಎಂದುಸಂಸತ್ತಿನ ಸಾರ್ಜೆಂಟ್-ಅಟ್-ಆರ್ಮ್ಸ್ ನರೇಂದ್ರ ಫರ್ನಾಂಡೊ ತಿಳಿಸಿದ್ದಾರೆ.

ಆಗಸ್ಟ್ 5 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕಿರಿಯ ಸಹೋದರ ಮತ್ತು ಅಧ್ಯಕ್ಷ ಗೋಟಬಯಾ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್‌ಎಲ್‌ಪಿಪಿ) ಭರ್ಜರಿ ಜಯ ದಾಖಲಿಸಿತ್ತು. ಒಟ್ಟು 225 ಸದಸ್ಯರ ಸಂಸತ್ತಿನಲ್ಲಿ 150 ಸ್ಥಾನಗಳನ್ನುಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.