ADVERTISEMENT

ಸ್ಟೆರಾಯಿಡ್‌, ಹೆಪಟೈಟಿಸ್‌–ಸಿ ಔಷಧ ಕೋವಿಡ್‌ಗೆ ಪರಿಣಾಮಕಾರಿ

ರಾಯಿಟರ್ಸ್
Published 3 ಸೆಪ್ಟೆಂಬರ್ 2020, 18:12 IST
Last Updated 3 ಸೆಪ್ಟೆಂಬರ್ 2020, 18:12 IST
   

ವಾಷಿಂಗ್ಟನ್‌: ಕೋವಿಡ್‌–19 ವಿರುದ್ಧಸ್ಟೆರಾಯಿಡ್‌ ಮತ್ತು ಹೆಪಟೈಟಿಸ್‌–ಸಿ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಜರ್ನಲ್‌ ಆಫ್‌ ದಿ ಅಮೆರಿಕ ಮೆಡಿಕಲ್‌ ಅಸೋಸಿಯೇಶನ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.

ಕಾರ್ಟಿಕೊ ಸ್ಟೆರಾಯಡ್ಸ್‌ ಔಷಧ ನೀಡಿದ ನಂತರ ಶೇ 68ರಷ್ಟು ಕೋವಿಡ್‌ ರೋಗಿಗಳು ಚೇತರಿಸಿಕೊಂಡಿದ್ದಾರೆ. ಮರಣ ಪ್ರಮಾಣವೂ ಕುಗ್ಗಿದೆ ಎಂದು ವರದಿ ಹೇಳಿದೆ

ಕಾರ್ಟಿಕೊ ಸ್ಟೆರಾಯಡ್ಸ್ ಮಾತ್ರವಲ್ಲ, ಯಾವುದೇ ಸ್ಟೆರಾಯಿಡ್‌ ಬಳಸಿದರೂ ಕೋವಿಡ್‌ ರೋಗಿಗಳ ಸಾವಿನ ಪ್ರಮಾಣವನ್ನು ಶೇ 20ರಷ್ಟು ತಗ್ಗಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಈ ಚಿಕಿತ್ಸೆ ವಿಧಾನವನ್ನು ಅನುಸರಿಸಲು ಶಿಫಾರಸು ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಅವರು ಮನವಿ ಮಾಡಿದ್ದಾರೆ.

ADVERTISEMENT

ಅದೇ ರೀತಿ ಹೆಪಟೈಟಿಸ್‌–ಸಿ ಚಿಕಿತ್ಸೆಗೆ ಬಳಸುವ ಬೊಸಿಪ್ರಿವಿರ್‌ ಮತ್ತು ನರ್ಲಾಪ್ರಿವಿರ್‌ನಂತಹ ಆ್ಯಂಟಿ ವೈರಲ್‌ ಡ್ರಗ್ಸ್ ಕೂಡ‌ ಕೋವಿಡ್‌–19 ಚಿಕಿತ್ಸೆಯಲ್ಲಿ ಪರಿಣಾಮಕಾರಿ ಫಲಿತಾಂಶ ನೀಡಿವೆ ಎಂದು ವಾಷಿಂಗ್ಟನ್‌ ಸ್ಕೂಲ್‌ ಆಫ್‌ ಮೆಡಿಸಿನ್‌ ವಿಶ್ವವಿದ್ಯಾಲಯದ ಸಂಶೋಧನಾ ತಂಡದ ಮುಖ್ಯಸ್ಥ ಬ್ರಿಯಾನ್‌ ಕ್ರೀಮರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.