ಚಿತ್ರ ಕೃಪೆ: ಪ್ರಾತಿನಿಧಿಕ
ಪೋರ್ಟ್ ಸುಡಾನ್: ಸುಡಾನ್‌ನ ಡಾರ್ಫುರ್ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಪರಿಣಾಮ 1,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಭೂಕುಸಿತ ಇಡೀ ಗ್ರಾಮವನ್ನೇ ಸರ್ವನಾಶ ಮಾಡಿದೆ. ಆದರೆ, ಅದೃಷ್ಟವೆಂಬಂತೆ ವ್ಯಕ್ತಿಯೊಬ್ಬರು ಮಾತ್ರ ಬದುಕುಳಿದಿದ್ದಾರೆ.
ಭಾರೀ ಮಳೆಯ ಬಳಿಕ ಭಾನುವಾರ ಸಂಭವಿಸಿದ ದುರಂತದಲ್ಲಿ ಮರ್ರಾ ಪರ್ವತ ಪ್ರದೇಶದಲ್ಲಿರುವ ತಾರಾಸಿನ್ ಗ್ರಾಮ ಸಂಪೂರ್ಣವಾಗಿ ನಾಶವಾಗಿದೆ ಎಂದು ಸುಡಾನ್ ವಿಮೋಚನಾ ಸೇನೆ (Sudan Liberation Movement) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಾಹಿತಿ ಪ್ರಕಾರ, ಸುಡಾನ್‌ನ ಡಾರ್ಫುರ್ ಗ್ರಾಮದ 1,000ಕ್ಕೂ ಹೆಚ್ಚು ನಿವಾಸಿಗಳು ಮೃತಪಟ್ಟಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ.
ಇನ್ನು, ಬೃಹತ್ ಭೂಕುಸಿತ ಉಂಟಾದ ಪರಿಣಾಮ ನೂರಾರು ಜನರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಸುಡಾನ್ ವಿಮೋಚನಾ ಸೇನೆ (ಎಸ್‌ಎಲ್‌ಎಂ) ವಿಶ್ವಸಂಸ್ಥೆ ಸಂಸ್ಥೆಗಳಿಗೆ ಮನವಿ ಮಾಡಿದೆ.
ಈ ಹಿಂದೆ 2018ರಲ್ಲಿ ಟೌಕೋಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 20 ಜನರು ಮೃತಪಟ್ಟಿದ್ದರು. ಆದರೆ, ಈಗ ಸುಡಾನ್‌ನ ಡಾರ್ಫುರ್ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಪರಿಣಾಮ 1,000ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.