ADVERTISEMENT

ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ಗೆ ಬ್ರಿಟನ್‌ನಲ್ಲಿ ಗೌರವ

ಪಿಟಿಐ
Published 6 ಏಪ್ರಿಲ್ 2025, 11:39 IST
Last Updated 6 ಏಪ್ರಿಲ್ 2025, 11:39 IST
<div class="paragraphs"><p>ಸುದರ್ಶನ್‌ ಪಟ್ನಾಯಕ್‌</p></div>

ಸುದರ್ಶನ್‌ ಪಟ್ನಾಯಕ್‌

   

ಲಂಡನ್: ಮರಳು ಶಿಲ್ಪದಲ್ಲಿ ಛಾಪು ಮೂಡಿಸಿರುವ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಬ್ರಿಟನ್‌ನಲ್ಲಿ ‘ಫ್ರೆಡ್‌ ಡ್ಯಾರಿಂಗ್ಟನ್ ಸ್ಯಾಂಡ್‌ ಮಾಸ್ಟರ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದಕ್ಷಿಣ ಇಂಗ್ಲೆಂಡ್‌ನ ಡೋಸೆಟ್‌ ಕೌಂಟಿಯ ವೇಮೌತ್‌ನಲ್ಲಿ ಶನಿವಾರ ಆರಂಭವಾದ ‘ಸ್ಯಾಂಡ್‌ವರ್ಲ್ಡ್‌ 2025– ಅಂತರರಾಷ್ಟ್ರೀಯ ಮರಳು ಶಿಲ್ಪ ಉತ್ಸವದ ವೇಳೆ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಲಾಯಿತು. ಮರಳು ಶಿಲ್ಪ ಕಲೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

ADVERTISEMENT

ಪಟ್ನಾಯಕ್ ಅವರು ಇದೇ ಉತ್ಸವದಲ್ಲಿ ‘ವಿಶ್ವ ಶಾಂತಿ’ ಎಂಬ ಸಂದೇಶದಡಿ ಗಣೇಶನ 10 ಅಡಿ ಎತ್ತರದ ಮರಳ ಶಿಲ್ಪವನ್ನು ರಚಿಸಿದರು.

‘ಈ ಪ್ರಶಸ್ತಿ ಲಭಿಸಿದ ಭಾರತದ ಮೊದಲ ಕಲಾವಿದ ಎಂಬ ಗೌರವಕ್ಕೆ ಪಾತ್ರನಾಗಿರುವುದು ಸಂತಸ ನೀಡಿದೆ’ ಎಂದು ಪಟ್ನಾಯಕ್‌ ಪ್ರತಿಕ್ರಿಯಿಸಿದ್ದಾರೆ. ವೇಮೌತ್‌ ಮೇಯರ್‌ ಜಾನ್ ಒರೆಲ್‌ ಅವರು ಪ್ರಶಸ್ತಿ ಹಾಗೂ ಪದಕ ಪ್ರದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.