ADVERTISEMENT

Ceasefire | ಸಂಘರ್ಷ ಅಂತ್ಯಗೊಂಡಿದೆ: ಸಿರಿಯಾ ಸರ್ಕಾರ

ಏಜೆನ್ಸೀಸ್
Published 15 ಜುಲೈ 2025, 15:36 IST
Last Updated 15 ಜುಲೈ 2025, 15:36 IST
   

ಬುಶ್ರಾ ಅಲ್‌ ಹರೀರ್‌ (ಸಿರಿಯಾ): ‘ದುರೂಸ್‌ ಪಂಗಡದ ಪಡೆ ಹಾಗೂ ಸುನ್ನಿ ಬದಾವಿ ಬುಡಕಟ್ಟು ಪಂಗಡದ ಮಧ್ಯೆ ನಡೆಯುತ್ತಿದ್ದ ಸಂಘರ್ಷ ಅಂತ್ಯಗೊಂಡಿದೆ’ ಎಂದು ಸಿರಿಯಾ ಸರ್ಕಾರ ಹೇಳಿದೆ. ಸಂಘರ್ಷದಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದರು.

ದುರೂಸ್‌ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ವೀದಾ ಪ್ರಾಂತ್ಯಕ್ಕೆ ಸಿರಿಯಾ ಸೇನೆ ನುಗ್ಗಿತ್ತು. ಬಳಿಕ ಪಂಗಡದ ಧಾರ್ಮಿಕ ನಾಯಕರೊಂದಿಗೆ ಸಂಘರ್ಷ ಅಂತ್ಯಗೊಳಿಸುವ ಬಗ್ಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತು. ದುರೂಸ್‌ಗೆ ಬೆಂಬಲ ನೀಡಿ ಸಂಘರ್ಷದಲ್ಲಿ ಭಾಗಿಯಾಗಿದ್ದ ಇಸ್ರೇಲ್‌, ಈ ಬೆಳವಣಿಗೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಿರಿಯಾ ಸೇನೆಯ ಟ್ಯಾಂಕ್‌ ಅನ್ನು ಇಸ್ರೇಲ್‌ ಸೇನೆಯು ಸೋಮವಾರ ತಡೆದಿತ್ತು. ಸಂಘರ್ಷದ ಕುರಿತು ಇಸ್ರೇಲ್‌ ರಕ್ಷಣಾ ಸಚಿವರು ಹೇಳಿಕೆಯನ್ನೂ ನೀಡಿದ್ದರು. ಇಸ್ರೇಲ್‌ ಮಧ್ಯಪ್ರವೇಶಿಸಿದ್ದರಿಂದ ಸಿರಿಯಾದಲ್ಲಿನ ಈ ಸಂಘರ್ಷ ಮತ್ತಷ್ಟು ಹೆಚ್ಚುವ ಬಗ್ಗೆ ಆತಂಕ ಉಂಟಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.