ADVERTISEMENT

ಪ್ರಮುಖ ದ್ವೀಪವೊಂದರ ಮೇಲೆ ದಾಳಿ ನಡೆಸಲು ಚೀನಾ ಸಿದ್ಧತೆ: ತೈವಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2022, 9:53 IST
Last Updated 6 ಆಗಸ್ಟ್ 2022, 9:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೈಪೆ: ಚೀನಾದ ವಿಮಾನಗಳು ಮತ್ತು ಹಡಗುಗಳು ತನ್ನ ಪ್ರಮುಖ ದ್ವೀಪದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿವೆ ಎಂದು ತೈವಾನ್‌ ಹೇಳಿದೆ.

ಈ ವಿಚಾರವಾಗಿ ಮಾಧ್ಯಮ ಹೇಳಿಕೆ ನೀಡಿರುವ ತೈವಾನ್‌ ರಕ್ಷಣಾ ಸಚಿವಾಲಯ, ‘ತೈವಾನ್ ಜಲಸಂಧಿಯ ಸುತ್ತ ಚೀನಾದ ವಿಮಾನಗಳು ಮತ್ತು ಹಡಗುಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಕೆಲವು ಗಡಿ ರೇಖೆಯನ್ನು ದಾಟಿ ಬಂದಿವೆ. ದೇಶದ ಪ್ರಮುಖ ದ್ವೀಪವೊಂದರ ಮೇಲೆ ದಾಳಿಗೆ ಚೀನಾ ಸಿದ್ಧತೆ ನಡೆಸುತ್ತಿವೆ’ ಎಂದು ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ, ವಿಮಾನಗಳು, ಗಸ್ತು ತಿರುಗುವ ನೌಕಾ ಹಡಗುಗಳು ಹಾಗೂ ಭೂ ಆಧಾರಿತ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್‌ ಮಾಹಿತಿ ನೀಡಿದೆ.

ADVERTISEMENT

ಚೀನಾದೊಂದಿಗೆ ಭವಿಷ್ಯದಲ್ಲಿ ಏರ್ಪಡಬಹುದಾದ ಸಂಘರ್ಷದ ಹಿನ್ನೆಲೆಯಲ್ಲಿ, ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ತೈವಾನ್‌ ಚಿತ್ತ ಹರಿಸಿದೆ. ಹೀಗಾಗಿ ‘ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ’ಯು ಈ ವರ್ಷ 500 ಕ್ಷಿಪಣಿಗಳನ್ನು ಉತ್ಪಾದಿಸಿ, ಸಾಮರ್ಥ್ಯವನ್ನು ದ್ವಿಗುಣಗೊಳಿಸುವತ್ತ ಕಾರ್ಯ ನಿರ್ವಹಿಸುತ್ತಿದೆ.

ಅಮೆರಿಕ ಸಂಸತ್‌ ಸ್ಪೀಕರ್‌ ನ್ಯಾನ್ಸಿ ಪೆಲೊಸಿ ಅವರ ತೈವಾನ್‌ ಭೇಟಿ ಹಿನ್ನೆಲೆಯಲ್ಲಿ ಚೀನಾ ವ್ಯಗ್ರಗೊಂಡಿದೆ. ಹೀಗಾಗಿ ತೈವಾನ್‌ ವಿರುದ್ಧ ಗುಟುರು ಹಾಕುತ್ತಿರುವ ಚೀನಾ, ಅದರತ್ತ ಕ್ಷಿಪಣಿಗಳನ್ನು ಉಡಾಯಿಸಿ ಯುದ್ಧೋನ್ಮಾದ ಪ್ರದರ್ಶಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.