ADVERTISEMENT

Taiwan Earthquake | ತೈವಾನ್‌ನಲ್ಲಿ ಪ್ರಬಲ ಭೂಕಂಪ: 9 ಜನರ ಸಾವು

ಏಜೆನ್ಸೀಸ್
Published 3 ಏಪ್ರಿಲ್ 2024, 2:40 IST
Last Updated 3 ಏಪ್ರಿಲ್ 2024, 2:40 IST
<div class="paragraphs"><p>ತೈವಾನ್‌ನ ಪೂರ್ವದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪನದ ನಂತರ ಹುವಾಲಿಯನ್‌ನಲ್ಲಿ ವಾಲಿಕೊಂಡಿರುವ&nbsp; ಯುರೇನಸ್ ಕಟ್ಟಡ </p></div>

ತೈವಾನ್‌ನ ಪೂರ್ವದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪನದ ನಂತರ ಹುವಾಲಿಯನ್‌ನಲ್ಲಿ ವಾಲಿಕೊಂಡಿರುವ  ಯುರೇನಸ್ ಕಟ್ಟಡ

   

ತೈಪೆ: ತೈವಾನ್‌ನಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವು ಕಟ್ಟಡಗಳು ಹಾನಿಗೀಡಾಗಿವೆ. 

ADVERTISEMENT

ಕಳೆದ 25 ವರ್ಷಗಳಲ್ಲೇ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ. ಬುಧವಾರ ನಸುಕಿನಲ್ಲಿ ಜನದಟ್ಟಣೆಯ ಸಮಯದಲ್ಲಿ ಈ ವಿಕೋಪ ಸಂಭವಿಸಿತು. ಕಲ್ಲಿದ್ದಲು ಗಣಿಗಳಲ್ಲಿ ಹಲವು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. 

ತೈವಾನ್‌ನ ಭೂಕಂಪನ ಮೇಲ್ವಿಚಾರಣಾ ಸಂಸ್ಥೆ ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 7.2 ಇತ್ತು ಎಂದು ಹೇಳಿದರೆ, ಅಮೆರಿಕದ ಜಿಯಾಲಾಜಿಕಲ್ ಸರ್ವೆ ರಿಕ್ಟರ್‌ ಮಾಪಕದಲ್ಲಿ 7.4 ತೀವ್ರತೆ ಇತ್ತು ಎಂದು ಹೇಳಿದೆ.

ಕಂಪನದ ಕೇಂದ್ರ ಬಿಂದು ತೈವಾನ್‌ನ ಪೂರ್ವ ಕರಾವಳಿಯಲ್ಲಿರುವ ಹುವಾಲಿಯನ್‌ನಿಂದ ಸುಮಾರು 18 ಕಿಲೋಮೀಟರ್ (11 ಮೈಲಿ) ದೂರದಲ್ಲಿ ಮತ್ತು ಸುಮಾರು 35 ಕಿಲೋಮೀಟರ್ (21 ಮೈಲಿ) ಆಳದಲ್ಲಿ ಇತ್ತು. ಭೂಕಂಪನದ ನಂತರ ಹಲವು ಬಾರಿ ಭೂಮಿ ಕಂಪಿಸಿರುವುದು ವರದಿಯಾಗಿದೆ.

ಪ್ರಮುಖ ಅಂಶಗಳು * ಸುಮಾರು 934 ಜನರು ಗಾಯಗೊಂಡಿದ್ದಾರೆ * ಭೂಕಂಪನದ ನಂತರ ರಾಷ್ಟ್ರೀಯ ಉದ್ಯಾನದಲ್ಲಿ ಮಿನಿ ಬಸ್‌ನಲ್ಲಿದ್ದ 50 ಜನರು ಸಂಪರ್ಕಕ್ಕೆ ಸಿಕ್ಕಿಲ್ಲ * ಕಲ್ಲಿದ್ದಲಿನ ಒಂದು ಗಣಿಯಲ್ಲಿ 64 ಜನರು ಸಿಲುಕಿದ್ದರೆ ಮತ್ತೊಂದರಲ್ಲಿ 6 ಮಂದಿ ಸಿಲುಕಿಕೊಂಡಿದ್ದಾರೆ * 24 ಕಡೆ ಭೂಕುಸಿತ ಉಂಟಾಗಿದೆ. 35 ರಸ್ತೆಗಳಿಗೆ ಭಾರಿ ಹಾನಿಯಾಗಿದೆ. ಅಲ್ಲದೆ ಹಲವು ಕಡೆ ಸೇತುವೆಗಳು ಮತ್ತು ಸುರಂಗಗಳಿಗೆ ಹಾನಿ ಉಂಟಾಗಿದೆ. * 2ನೇ ವಿಶ್ವ ಸಮರಕ್ಕೆ ಪೂರ್ವದಲ್ಲಿ ನಿರ್ಮಿಸಲಾದ ಪರಿವರ್ತನಾ ಶಾಲೆ ಮತ್ತು ತೈಪೆಯ ದಕ್ಷಿಣದಲ್ಲಿರುವ ಟಾಯುವಾನ್‌ನಲ್ಲಿರುವ ಮುಖ್ಯ ವಿಮಾನ ನಿಲ್ದಾಣದ ಕೆಲವು ವಿಭಾಗಗಳಿಗೆ ಸಣ್ಣಪುಟ್ಟ ಹಾನಿ ಆಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.