
ತೈಪೆ: ತೈವಾನ್‌ನ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥ ಶನಿವಾರ ಬೆಳಿಗ್ಗೆ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಸೇನಾ ಸ್ವಾಮ್ಯದ ‘ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ’ಯ ಉಪ ಮುಖ್ಯಸ್ಥ ಔ ಯಾಂಗ್ ಲಿ-ಹಸಿಂಗ್ ಅವರು ಶನಿವಾರ ಬೆಳಗ್ಗೆ ದಕ್ಷಿಣ ತೈವಾನ್‌ನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ’ ಎಂದು ಸಿಎನ್‌ಎ ವರದಿ ಮಾಡಿದೆ. ಸಾವಿನ ಕಾರಣಗಳ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಔ ಯಾಂಗ್ ಅವರು ಪಿಂಗ್ಟಂಗ್‌ನ ದಕ್ಷಿಣ ಕೌಂಟಿಗೆ ವ್ಯಾಪಾರ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರ ಸಾವು ಸಂಭವಿಸಿದೆ. ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಈ ವರ್ಷದ ಆರಂಭದಲ್ಲಿ ಅವರು ವಹಿಸಿಕೊಂಡಿದ್ದರು ಎಂದು ಮಾಧ್ಯಮ ಸಂಸ್ಥೆ ಸಿಎನ್‌ಎ ಹೇಳಿದೆ.
ಚೀನಾದೊಂದಿಗೆ ಭವಿಷ್ಯದಲ್ಲಿ ಏರ್ಪಡಬಹುದಾದ ಸಂಘರ್ಷದ ಹಿನ್ನೆಲೆಯಲ್ಲಿ, ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ತೈವಾನ್ ಚಿತ್ತ ಹರಿಸಿದೆ. ಹೀಗಾಗಿ ‘ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ’ಯು ಈ ವರ್ಷ 500 ಕ್ಷಿಪಣಿಗಳನ್ನು ಉತ್ಪಾದಿಸಿ, ಸಾಮರ್ಥ್ಯವನ್ನು ದ್ವಿಗುಣಗೊಳಿಸುವತ್ತ ಕಾರ್ಯ ನಿರ್ವಹಿಸುತ್ತಿದೆ.
ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರ ತೈವಾನ್ ಭೇಟಿ ಹಿನ್ನೆಲೆಯಲ್ಲಿ ಚೀನಾ ವ್ಯಗ್ರಗೊಂಡಿದೆ. ಹೀಗಾಗಿ ತೈವಾನ್ ವಿರುದ್ಧ ಗುಟುರು ಹಾಕುತ್ತಿರುವ ಚೀನಾ, ಅದರತ್ತ ಕ್ಷಿಪಣಿಗಳನ್ನು ಉಡಾಯಿಸಿ ಯುದ್ಧೋನ್ಮಾದ ಪ್ರದರ್ಶಿಸಿದೆ. ಈ ಮಧ್ಯೆ ಸಂಭವಿಸಿರುವ ಈ ಸಾವು ಹಲವು ಸಹಜವಾಗಿಯೇ ಜಗತ್ತಿನ ಗಮನ ಸೆಳೆದಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.