ADVERTISEMENT

ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಪಾಕ್‌ಗೆ ಇರಾನ್ ತಾಕೀತು

ಇರಾನ್ ಅಧ್ಯಕ್ಷರಿಂದ ಇಮ್ರಾನ್ ಖಾನ್ ಜತೆ ದೂರವಾಣಿ ಮೂಲಕ ಮಾತುಕತೆ

ಏಜೆನ್ಸೀಸ್
Published 10 ಮಾರ್ಚ್ 2019, 8:50 IST
Last Updated 10 ಮಾರ್ಚ್ 2019, 8:50 IST
ಇರಾನ್ ಅಧ್ಯಕ್ ಹಸನ್ ರೌಹಾನಿ (ರಾಯಿಟರ್ಸ್ ಚಿತ್ರ)
ಇರಾನ್ ಅಧ್ಯಕ್ ಹಸನ್ ರೌಹಾನಿ (ರಾಯಿಟರ್ಸ್ ಚಿತ್ರ)   

ಟೆಹರಾನ್:ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರ್ಕಾರಕ್ಕೆ ಇರಾನ್ ತಾಕೀತು ಮಾಡಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜತೆ ಇರಾನ್ ಅಧ್ಯಕ್ ಹಸನ್ ರೌಹಾನಿದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

‘ಪಾಕಿಸ್ತಾನದಲ್ಲಿದ್ದುಕೊಂಡು ಕಾರ್ಯಾಚರಿಸುವ ಅನೇಕ ಉಗ್ರ ಸಂಘಟನೆಗಳ ದಾಳಿಗೆ ನಾವು ಗುರಿಯಾಗಿದ್ದೇವೆ. ಇಂತಹ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪಾಕಿಸ್ತಾನ ಸೇನೆ ಮತ್ತು ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧರಿದ್ದೇವೆ’ ಎಂದು ಮಾತುಕತೆ ವೇಳೆ ರೌಹಾನಿ ಹೇಳಿದ್ದಾರೆ.

ADVERTISEMENT

‘ಭಯೋತ್ಪಾದಕರ ವಿರುದ್ಧ ನಿಮ್ಮಿಂದ ಕಠಿಣ ಕ್ರಮವನ್ನೂ ನಿರೀಕ್ಷಿಸುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ಇರಾನ್ ಗಡಿಯಲ್ಲಿ ಫೆಬ್ರುವರಿಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ್ದಪಾಕಿಸ್ತಾನದ ಉಗ್ರರು ಪ್ರತಿಷ್ಠಿತ ರೆವಲ್ಯೂಷನರಿ ಗಾರ್ಡ್ಸ್ ಪಡೆಯ 27 ಯೋಧರನ್ನು ಹತ್ಯೆ ಮಾಡಿದ್ದರು. ಪಾಕಿಸ್ತಾನದ ಜೈಷ್‌ ಅಲ್‌ ಅದಿಲ್‌ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿತ್ತು.ಈ ಹಿನ್ನೆಲೆಯಲ್ಲಿ ಇರಾನ್ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.