ಕಾಬೂಲ್: ಅಫ್ಗಾನಿಸ್ತಾನದ ಸರ್ಕಾರಿ ಅಧಿಕಾರಿಗಳಿಗೆ ಸಾರ್ವತ್ರಿಕ ಕ್ಷಮಾದಾನ ಘೋಷಿಸಿರುವ ತಾಲಿಬಾನ್, ಕೆಲಸಕ್ಕೆ ಮರಳುವಂತೆ ಅವರಿಗೆ ಮಂಗಳವಾರ ಸೂಚಿಸಿದೆ.
ಅಫ್ಗಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡ ಎರಡು ದಿನಗಳ ಬಳಿಕ ತಾಲಿಬಾನ್ ಈ ಸೂಚನೆ ನೀಡಿದೆ.
‘ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಸಾರ್ವತ್ರಿಕ ಕ್ಷಮಾದಾನ ನೀಡಲಾಗಿದೆ. ಹಾಗಾಗಿ ನೀವೆಲ್ಲರೂ ತಮ್ಮ ದೈನಂದಿನ ಜೀವನವನ್ನು ಸಂಪೂರ್ಣ ವಿಶ್ವಾಸದಿಂದ ಆರಂಭಿಸಬೇಕು’ ಎಂದು ತಾಲಿಬಾನ್ ಪ್ರಕಟಣೆಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.