ADVERTISEMENT

ಮಹಿಳೆಯರ ಜೀವನ ಸುಧಾರಣೆಗೆ ಕ್ರಮ: ತಾಲಿಬಾನ್

ಎಪಿ
Published 25 ಜೂನ್ 2023, 13:39 IST
Last Updated 25 ಜೂನ್ 2023, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: ಅಫ್ಗಾನಿಸ್ತಾನದಲ್ಲಿ ಮಹಿಳೆಯರ ಜೀವನ ಸುಧಾರಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಾಲಿಬಾನ್‌ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಝದಾ ಭಾನುವಾರ ಸಂದೇಶ ಬಿಡುಗಡೆ ಮಾಡಿದ್ದಾರೆ.

‌ಒತ್ತಾಯದ ವಿವಾಹ ಸೇರಿದಂತೆ ಸಾಂಪ್ರದಾಯಿಕ ಕಟ್ಟಲೆಗಳಿಂದ ಮಹಿಳೆಯರ ರಕ್ಷಣೆಗೆ ಹಲವು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಹಿಳೆಯರು ಧರಿಸುವ ಹಿಜಾಬ್‌ ಕುರಿತಂತೆ ಈ ಹಿಂದಿನ 20 ವರ್ಷಗಳ ತಾಲಿಬಾನ್ ಆಡಳಿತದಲ್ಲಿ ಇದ್ದ ಆಚರಣೆಗಳು ಶೀಘ್ರವೇ ಕೊನೆಗೊಳ್ಳಲಿವೆ ಎಂದೂ ತಿಳಿಸಿದ್ದಾರೆ.

ADVERTISEMENT

ಅಫ್ಗನ್‌ನಲ್ಲಿ ಮಹಿಳೆಯರ ಸಾರ್ವಜನಿಕ ಜೀವನ, ಉದ್ಯೋಗ ಮತ್ತು ಶಿಕ್ಷಣಕ್ಕೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿರುವ ಅಖುಂದ್‌ಝದಾ ವಿರಳವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಇವರ ಸುತ್ತಲೂ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುವ ವಿದ್ವಾಂಸರು ಸುತ್ತುವರಿದಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.