ADVERTISEMENT

ಆರ್ಥಿಕ ಸಂಕಷ್ಟ: ಬ್ರಿಟನ್, ಇರಾನ್ ರಾಜತಾಂತ್ರಿಕರ ಭೇಟಿ ಮಾಡಿದ ತಾಲಿಬಾನ್

ಏಜೆನ್ಸೀಸ್
Published 6 ಅಕ್ಟೋಬರ್ 2021, 7:12 IST
Last Updated 6 ಅಕ್ಟೋಬರ್ 2021, 7:12 IST
ಕಾಬೂಲ್‌ನ ಅಧ್ಯಕ್ಷರ ಆಡಳಿತ ಕಚೇರಿಯಲ್ಲಿ ಅಫ್ಗಾನಿಸ್ತಾನದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರದಾರ್‌ ಮತ್ತಿತರ ನಾಯಕರು ಮಂಗಳವಾರ ಬ್ರಿಟನ್ ಪ್ರಧಾನಿಯ ಉನ್ನತ ಪ್ರತಿನಿಧಿ ಸರ್ ಸೈಮನ್ ಗ್ಯಾಸ್ ಅವರನ್ನು ಭೇಟಿ ಮಾಡಿದರು.
ಕಾಬೂಲ್‌ನ ಅಧ್ಯಕ್ಷರ ಆಡಳಿತ ಕಚೇರಿಯಲ್ಲಿ ಅಫ್ಗಾನಿಸ್ತಾನದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರದಾರ್‌ ಮತ್ತಿತರ ನಾಯಕರು ಮಂಗಳವಾರ ಬ್ರಿಟನ್ ಪ್ರಧಾನಿಯ ಉನ್ನತ ಪ್ರತಿನಿಧಿ ಸರ್ ಸೈಮನ್ ಗ್ಯಾಸ್ ಅವರನ್ನು ಭೇಟಿ ಮಾಡಿದರು.   

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಸರ್ಕಾರ ರಚಿಸಿದ ನಂತರ ತಾಲಿಬಾನ್ ನಾಯಕರು ಇದೇ ಮೊದಲ ಬಾರಿಗೆ ಕಾಬೂಲ್‌ನಲ್ಲಿರುವ ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗಳನ್ನು ಮಂಗಳವಾರ ಭೇಟಿಯಾಗಿದ್ದಾರೆ.

ತಾಲಿಬಾನ್ ನಾಯಕರು ಬ್ರಿಟನ್ ಅಧಿಕಾರಿಗಳನ್ನು ಭೇಟಿ ಮಾಡಿರುವುದರಿಂದ ಪ್ರಸ್ತುತ ದೇಶದಲ್ಲಿ ಉಂಟಾಗಿರುವ ಆರ್ಥಿಕ ಕುಸಿತ, ಆಹಾರದ ಕೊರತೆಯಂತಹ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಸಿಗುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದೆ.

ಬ್ರಿಟನ್ ಅಧಿಕಾರಿಗಳನ್ನು ಭೇಟಿಯಾಗುವ ಮುನ್ನ, ತಾಲಿಬಾನ್ ನಾಯಕರು ಇರಾನ್ ನಿಯೋಗವನ್ನು ಭೇಟಿಯಾಗಿ ವ್ಯಾಪಾರ ಒಪ್ಪಂದಗಳು ಸೇರಿದಂತೆ ಅಫ್ಗಾನಿಸ್ತಾನದಲ್ಲಿನ ಆರ್ಥಿಕ ಪುನಶ್ಚೇತನಕ್ಕೆ ಅಗತ್ಯವಾದ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.

ADVERTISEMENT

ಈ ಮಧ್ಯೆ, ಇಸ್ಲಾಮಿಕ್ ಸ್ಟೇಟ್ (ಐಸಿಸ್‌) ಗುಂಪಿನ 11 ಸದಸ್ಯರನ್ನು ಬಂಧಿಸಿರುವುದಾಗಿ ತಾಲಿಬಾನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.