ADVERTISEMENT

ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸ ನಮ್ಮ ನಿಯಂತ್ರಣದಲ್ಲಿದೆ: ತಾಲಿಬಾನ್ ಉಗ್ರರು

ರಾಯಿಟರ್ಸ್
Published 15 ಆಗಸ್ಟ್ 2021, 16:30 IST
Last Updated 15 ಆಗಸ್ಟ್ 2021, 16:30 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ಕಾಬೂಲ್: ಅಫ್ಗಾನಿಸ್ತಾನದ ಅಧ್ಯಕ್ಷರ ನಿವಾಸ ನಮ್ಮ ನಿಯಂತ್ರಣದಲ್ಲಿದೆ ಎಂದು ಕಾಬೂಲ್‌ನಲ್ಲಿರುವ ತಾಲಿಬಾನ್‌ನ ಇಬ್ಬರು ಹಿರಿಯ ಕಮಾಂಡರ್‌ಗಳು ತಿಳಿಸಿದ್ದಾರೆ.

ಅಧ್ಯಕ್ಷ ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕಮಾಂಡರ್‌ಗಳು ಈ ಹೇಳಿಕೆ ನೀಡಿದ್ದಾರೆ.

ಆದರೆ, ತಾಲಿಬಾನ್‌ನ ಈ ಹೇಳಿಕೆ ಬಗ್ಗೆ ಅಫ್ಗಾನಿಸ್ತಾನ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸರ್ಕಾರಿ ಅಧಿಕಾರಿಗಳು ತಕ್ಷಣ ಸಂಪರ್ಕಕ್ಕೆ ದೊರೆತಿಲ್ಲ ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಇದಕ್ಕೂ ಮುನ್ನ, ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ರಾಯಿಟರ್ಸ್’ ವರದಿ ಮಾಡಿತ್ತು.

ಈ ಕುರಿತು ಮಾಹಿತಿ ನೀಡಲು ಅಧ್ಯಕ್ಷರ ಕಚೇರಿ ನಿರಾಕರಿಸಿತ್ತು. ಭದ್ರತಾ ಕಾರಣಗಳಿಗಾಗಿ ಅಶ್ರಫ್ ಘನಿ ಅವರ ಕುರಿತಾದ ಮಾಹಿತಿ ನೀಡಲಾಗದು ಎಂದು ಕಚೇರಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.