ADVERTISEMENT

ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೋತಿದೆ, ಈ ಗೆಲುವು ನಮ್ಮೆಲ್ಲರದು: ತಾಲಿಬಾನ್

ಡೆಕ್ಕನ್ ಹೆರಾಲ್ಡ್
Published 31 ಆಗಸ್ಟ್ 2021, 5:48 IST
Last Updated 31 ಆಗಸ್ಟ್ 2021, 5:48 IST
ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ತಾಲಿಬಾನಿಗಳು – ಎಎಫ್‌ಪಿ ಚಿತ್ರ
ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ತಾಲಿಬಾನಿಗಳು – ಎಎಫ್‌ಪಿ ಚಿತ್ರ   

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಅಮೆರಿಕವು ಸೋಲನುಭವಿಸಿದೆ. ಈ ಗೆಲುವು ನಮಗೆಲ್ಲರಿಗೂ ಸೇರಿದ್ದು ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

ಅಮೆರಿಕದ ಪಡೆಗಳು ಕಾಬೂಲ್‌ನಿಂದ ತೆರಳಿದ್ದು, ನಮಗೆ ಸ್ವಾತಂತ್ರ್ಯ ದೊರೆತಿದೆ. ಅಮೆರಿಕಕ್ಕೆ ತನ್ನ ಎಲ್ಲ ಉದ್ದೇಶವನ್ನು ಈಡೇರಿಸಿಕೊಳ್ಳುವುದು ಇಲ್ಲಿ ಸಾಧ್ಯವಾಗಲಿಲ್ಲ. ಅಮೆರಿಕವು ನಮ್ಮೊಂದಿಗೆ ಸೋಲನುಭವಿಸಿದೆ. ಆದಾಗ್ಯೂ, ಆ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ತಾಲಿಬಾನ್ ಬಯಸುತ್ತದೆ ಎಂದು ಮುಜಾಹಿದ್ ಹೇಳಿದ್ದಾರೆ.

ಅಮೆರಿಕ ಪಡೆಗಳು ವಾಪಸಾದ ಬಳಿಕ ಕಾಬೂಲ್‌ ವಿಮಾನ ನಿಲ್ದಾಣದ ರನ್‌ವೇಯಲ್ಲಿ ನಡೆಯುವ ಮೂಲಕ ತಾಲಿಬಾನ್ ನಾಯಕರು ಸಾಂಕೇತಿಕವಾಗಿ ವಿಜಯೋತ್ಸವ ಆಚರಿಸಿದ್ದಾರೆ.

ಆಗಸ್ಟ್ 30ರ ಗಡುವು ಮುಗಿಯುತ್ತಿದ್ದಂತೆಯೇ, ಅಫ್ಗಾನಿಸ್ತಾನದಿಂದ ತೆರವು ಕಾರ್ಯಾಚರಣೆ ಮುಗಿದಿದೆ ಎಂದು ಅಮೆರಿಕ ಘೋಷಿಸಿತ್ತು. ಸೋಮವಾರ ಮಧ್ಯರಾತ್ರಿ ವೇಳೆಗೆ ಅಮೆರಿಕ ಯೋಧರನ್ನೊಳಗೊಂಡ ಕೊನೆಯ ವಿಮಾನ ಕಾಬೂಲ್‌ನಿಂದ ನಿರ್ಗಮಿಸಿತ್ತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.