ADVERTISEMENT

ಮುಂದಿನ ಕೆಲ ವಾರಗಳಲ್ಲಿ ತಾಲಿಬಾನ್‌ ಆಡಳಿತದ ನೀತಿ ಅನಾವರಣ: ವಕ್ತಾರರ ಮಾಹಿತಿ

ರಾಯಿಟರ್ಸ್
Published 21 ಆಗಸ್ಟ್ 2021, 4:21 IST
Last Updated 21 ಆಗಸ್ಟ್ 2021, 4:21 IST
ತಾಲಿಬಾನ್‌ ವಕ್ತಾರರ ಸುದ್ದಿಗೋಷ್ಠಿ
ತಾಲಿಬಾನ್‌ ವಕ್ತಾರರ ಸುದ್ದಿಗೋಷ್ಠಿ    

ಕಾಬೂಲ್‌: ಮುಂದಿನ ಕೆಲವು ವಾರಗಳಲ್ಲಿ ಅಫ್ಗಾನಿಸ್ತಾನದ ಹೊಸ ಆಡಳಿತದ ಕಟ್ಟುಪಾಡು, ಚೌಕಟ್ಟನ್ನು ರೂಪಿಸುವ ಗುರಿಯನ್ನು ತಾಲಿಬಾನ್ ಹೊಂದಿದೆ ಎಂದು ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.

'ತಾಲಿಬಾನ್‌ ಸಂಘಟನೆಯೊಳಗಿರುವ ಕಾನೂನು, ಧಾರ್ಮಿಕ ಮತ್ತು ವಿದೇಶಾಂಗ ನೀತಿ ನಿರೂಪಕರು, ತಜ್ಞರು ಮುಂದಿನ ಕೆಲವು ವಾರಗಳಲ್ಲಿ ಹೊಸ ಆಡಳಿತದ ಚೌಕಟ್ಟನ್ನು ರೂಪಿಸುವ ಗುರಿಯನ್ನು ಹೊಂದಿದ್ದಾರೆ’ ಎಂದು ತಾಲಿಬಾನ್‌ನ ಅಧಿಕಾರಿ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಅಫ್ಗಾನಿಸ್ತಾನದ ಆಡಳಿತವನ್ನು ಕಳೆದ ಭಾನುವಾರವಷ್ಟೇ ಕಸಿದುಕೊಂಡಿರುವ ತಾಲಿಬಾನ್‌ ಈ ಬಾರಿ ಉದಾರವಾದಿ ಆಡಳಿತ ನೀಡುವುದಾಗಿ ಹೇಳುತ್ತಿದೆ. ಆದರೆ, 1996 – 2001ರ ವರೆಗಿನ ತನ್ನ ಆಡಳಿತದಲ್ಲಿ ತಾಲಿಬಾನ್‌ ಅತ್ಯಂತ ಕಠಿಣ ನೀತಿಗಳೊಂದಿಗೆ ಆಡಳಿತ ನಡೆಸಿತ್ತು. ‌

ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ 2001ರ ಸೆ.11ರಂದು ದಾಳಿ ನಡೆಸಿದ ಉಗ್ರ ಸಂಘಟನೆ ಅಲ್‌ ಖೈದಾಗೆ ಆಶ್ರಯ ನೀಡಿದ ಕಾರಣಕ್ಕಾಗಿ ಅಮೆರಿಕದ ಮಿಲಿಟರಿ ಅದೇ ವರ್ಷದ ಅಕ್ಟೋಬರ್‌ನಲ್ಲಿ ಅಫ್ಗಾನಿಸ್ತಾನ ಪ್ರವೇಶಿಸಿತ್ತು. 2001ರ ಡಿಸೆಂಬರ್‌ನಲ್ಲಿ ತಾಲಿಬಾನ್‌ ಸರ್ಕಾರವನ್ನು ಕೆಡವಿ ಹೊಸ ಸರ್ಕಾರ ತಂದಿತ್ತು. ಅದರೊಂದಿಗೆ ಅಂತ್ಯವಾಗಿದ್ದ ಕಠಿಣ ಕಾನೂನಿನ ತಾಲಿಬಾನ್‌ ಯುಗ. ಅಮೆರಿಕದ ಸೇನಾ ಹಿಂತೆಗೆದ ಮೂಲಕ ಮತ್ತೆ ಆರಂಭವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.