ADVERTISEMENT

ತಮಿಳು ಭಾಷೆಯ ನಾಮಫಲಕ ವಿರೂಪ: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 19:31 IST
Last Updated 26 ನವೆಂಬರ್ 2019, 19:31 IST

ಕೊಲಂಬೊ : ಬೀದಿಗಳಲ್ಲಿ ಅಳವಡಿಸಿದ್ದ ತಮಿಳು ಭಾಷೆಯ ನಾಮಫಲಕಗಳನ್ನು ವಿರೂಪಗೊಳಿಸಿರುವುದನ್ನು ಖಂಡಿಸಿರುವ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು, ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ತಮ್ಮ ಸಹೋದರರೂ ಆಗಿರುವ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ನವೆಂಬರ್‌ 29 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಅದಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಈ ಹೀನ ಕೃತ್ಯ ಎಸಗಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತಮಿಳು ಭಾಷೆಯ ನಾಮಫಲಕಗಳನ್ನು ವಿರೂಪಗೊಳಿಸಿದವರನ್ನು ಪತ್ತೆ ಹಚ್ಚಿ ಶೀಘ್ರದಲ್ಲಿಯೇ ಬಂಧಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ADVERTISEMENT

ಗೋಟಬಯ ಅವರ ಭಾರತ ಪ್ರವಾಸಕ್ಕೆ ಅಡ್ಡಿಪಡಿಸುವ ಉದ್ದೇಶದಿಂದಲೇ ತಮಿಳು ಭಾಷೆಯ ನಾಮಫಲಕಗಳನ್ನು ವಿರೂಪಗೊಳಿಸಲಾಗಿದೆ. ಒಂದೇ ಗುಂಪಿನವರು ಈ ಕೃತ್ಯವೆಸಗಿದ್ದಾರೆ ಎಂದು ಪ್ರಧಾನಿ ರಾಜಪಕ್ಸೆ ಅವರು ತಮ್ಮ ಆಪ್ತರ ಬಳಿ ಹೇಳಿದ್ದಾರೆ ಎಂದು ‘ಡೇಲಿ ಮಿರರ್‌’ ವರದಿ ಮಾಡಿದೆ.

ತಮಿಳು ಭಾಷಿಕರು ಹಾಗೂ ಸರ್ಕಾರದ ನಡುವೆ ವೈಮನಸ್ಸು ಹುಟ್ಟಿಸಲು ಹಾಗೂಶ್ರೀಲಂಕಾ ಮತ್ತು ಭಾರತದ ನಡುವಿನ ಒಪ್ಪಂದದಲ್ಲಿ ಹುಳಿ ಹಿಂಡಲು ಈ ಗುಂಪು ಯತ್ನಿಸಿದೆ ಎಂದು ಹೇಳಿರುವ ಅವರು, ಈ ನಾಮಫಲಕಗಳನ್ನು ಪುನರ್‌ ಅರಳವಡಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.