ADVERTISEMENT

ಪ್ರಚೋದನಾತ್ಮಕ ಸಂದೇಶ: ವಿಶ್ವದ ಕೆಲ ನಾಯಕರ ವಿರುದ್ಧವೂ ಕ್ರಮ ಸಾಧ್ಯವೇ?

ಟ್ರಂಪ್‌ ವಿರುದ್ಧ ಟ್ವಿಟರ್ ಕ್ರಮ ನಂತರ ಉದ್ಭವಿಸಿರುವ ಪ್ರಶ್ನೆಗಳು

ಏಜೆನ್ಸೀಸ್
Published 13 ಜನವರಿ 2021, 5:38 IST
Last Updated 13 ಜನವರಿ 2021, 5:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸ್ಯಾನ್‌ಫ್ರಾನ್ಸಿಸ್ಕೊ: ಕ್ಯಾಪಿಟಲ್‌ ಹಿಲ್‌ ಮೇಲೆ ನಡೆದ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚೋದನೆಯೇ ಕಾರಣ ಎಂಬ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್‌, ಅವರ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಿದೆ.

ಫೇಸ್‌ಬುಕ್‌, ಸ್ನ್ಯಾಪ್‌ಚಾಟ್‌ ಹಾಗೂ ಶಾಪಿಫೈ ಸಹ ಇದೇ ಕ್ರಮವನ್ನು ಅನುಸರಿಸಿ, ಅವರ ಖಾತೆಯನ್ನು ರದ್ದುಗೊಳಿಸಿವೆ. ಆದರೆ, ಈ ಸಾಮಾಜಿಕ ಮಾಧ್ಯಮಗಳು ವಿಶ್ವದ ಇತರ ನಾಯಕರ ವಿರುದ್ಧ ಇದೇ ಮಾನದಂಡದ ಆಧಾರದ ಮೇಲೆ ಕ್ರಮ ಕೈಗೊಳ್ಳುವವೇ ಎಂಬುದೇ ಈಗ ಎಲ್ಲರ ಮುಂದಿರುವ ಪ್ರಶ್ನೆ.

ಈ ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳು, ಸಾಮಾನ್ಯ ಜನರಿಗೆ ನೀಡದಂತಹ ವಿಶೇಷ ಸವಲತ್ತುಗಳನ್ನು ಡೊನಾಲ್ಡ್‌ ಟ್ರಂಪ್‌ ಅವರಿಗೆ ನೀಡಿದ್ದವು ಎಂಬುದು ಗಮನಾರ್ಹ.

ADVERTISEMENT

ತಮ್ಮ ವೇದಿಕೆಗಳ ಮೂಲಕ ಪ್ರಚೋದನಾತ್ಮಕ ಸಂದೇಶಗಳನ್ನು ಹರಿಬಿಡುವ ಇತರ ನಾಯಕರ ವಿರುದ್ಧವೂ ಇದೇ ರೀತಿಯ ಕಠಿಣ ಕ್ರಮಗಳನ್ನು ಈ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತೆಗೆದುಕೊಳ್ಳಬಲ್ಲವೇ? ಎಂದು ಜನರು ಕೇಳುವಂತಾಗಿದೆ.

‘ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪರಿಕಲ್ಪನೆಗೂ, ನಿರಂಕುಶವಾದದಿಂದ ಕೂಡಿದ ವಾಕ್‌ ಸ್ವಾತಂತ್ರ್ಯಕ್ಕೂ ಇರುವ ವ್ಯತ್ಯಾಸವನ್ನು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಈಗ ಅರಿತಿವೆ. ಪ್ರಚೋದನಾತ್ಮಕ ಸಂದೇಶಗಳ ಮೇಲೆ ನಿಯಂತ್ರಣ ಹೇರುವ ಅಗತ್ಯವನ್ನೂ ಮನಗಂಡಿವೆ’ ಎನ್ನುತ್ತಾರೆ ಮೆಸಾಚ್ಯುಸೆಟ್ಸ್‌ ಯೂನಿವರ್ಸಿಟಿಯ ಪ್ರಾಧ್ಯಾಪಕ ಎಥಾನ್‌ ಜುಗರ್‌ಮ್ಯಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.