ADVERTISEMENT

ಪಾಕಿಸ್ತಾನ: ತೆಹ್ರೀಕ್–ಇ–ತಾಲಿಬಾನ್‌ನ 34 ಉಗ್ರರ ಬಂಧನ

ಪಿಟಿಐ
Published 31 ಮೇ 2025, 16:01 IST
Last Updated 31 ಮೇ 2025, 16:01 IST
---
---   

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಿಷೇಧಿತ ತೆಹ್ರೀಕ್–ಇ–ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆಯ 34 ಉಗ್ರರನ್ನು ಬಂಧಿಸಲಾಗಿದ್ದು, ಆ ಮೂಲಕ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬಂಧಿತರ ಪೈಕಿ ಮೂವರು ಭಯೋತ್ಪಾದಕರನ್ನು ‘ಅತ್ಯಂತ ಅಪಾಯಕಾರಿ’ ಎಂಬುದಾಗಿ ಗುರುತಿಸಲಾಗಿದೆ ಎಂದು ಭಯೋತ್ಪಾದನೆ ನಿಗ್ರಹ ಇಲಾಖೆ (ಸಿಟಿಡಿ) ತಿಳಿಸಿದೆ. 

ಈ ವೇಳೆ, ಅಪಾರ ಪ್ರಮಾಣದ ಸ್ಫೋಟಕಗಳು ಹಾಗೂ ನಿಷೇಧಿತ ಪುಸ್ತಕಗಳನ್ನು ವಶಪಡೆಯಲಾಗಿದೆ ಇಲಾಖೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.