ADVERTISEMENT

ಅಮೆರಿಕ | ಹೊಸ ವರ್ಷದ ದಿನವೇ ಟ್ರಕ್ ದಾಳಿ; 15 ಸಾವು: ಐಎಸ್ ಧ್ವಜ ಪತ್ತೆ

ಪಿಟಿಐ
Published 2 ಜನವರಿ 2025, 2:09 IST
Last Updated 2 ಜನವರಿ 2025, 2:09 IST
<div class="paragraphs"><p>ನ್ಯೂ ಅರ್ಲಿನ್ಸ್‌ನಲ್ಲಿ ಟ್ರಕ್‌ ದಾಳಿ ನಡೆದ ಸ್ಥಳ</p></div>

ನ್ಯೂ ಅರ್ಲಿನ್ಸ್‌ನಲ್ಲಿ ಟ್ರಕ್‌ ದಾಳಿ ನಡೆದ ಸ್ಥಳ

   

ರಾಯಿಟರ್ಸ್ ಚಿತ್ರ

ಹ್ಯೂಸ್ಟನ್‌ (ಲೂಸಿಯಾನಾ, ಅಮೆರಿಕ): ನ್ಯೂ ಅರ್ಲಿನ್ಸ್‌ನ ಬೌರ್ಬನ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನಸಂದಣಿಯ ಮೇಲೆ ವ್ಯಕ್ತಿಯೊಬ್ಬ ಟ್ರಕ್‌ ಚಾಲನೆ ಮಾಡಿದ್ದು, 15 ಜನರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ADVERTISEMENT

ಕೃತ್ಯವೆಸಗಿದ ಟೆಕ್ಸಾಸ್‌ ಮೂಲದ 42 ವರ್ಷದ ವ್ಯಕ್ತಿ ನಿವೃತ್ತ ಸೈನಿಕ ಹಾಗೂ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಶಂಕಿತನನ್ನು ಶಮ್ಸುದ್‌–ದಿನ್‌ ಬಹರ್‌ ಜಬ್ಬರ್‌ ಎಂದು ಗುರುತಿಸಲಾಗಿದೆ. ಕೃತ್ಯದ ಬೆನ್ನಲ್ಲೇ, ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದಾನೆ. ಆತ ಟ್ರಕ್‌ ಅನ್ನು ಬಾಡಿಗೆಗೆ ಪಡೆದು ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. 

ಬುಧವಾರ ಮುಂಜಾನೆ 3 ಗಂಟೆ ಹೊತ್ತಿಗೆ ನಡೆದ ಈ ದಾಳಿಯು ನಗರದಾದ್ಯಂತ ಆತಂಕ ಸೃಷ್ಟಿಸಿದೆ. ಹಾಗೆಯೇ, ಭದ್ರತಾ ವೈಫಲ್ಯಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಟ್ರಕ್‌ನಲ್ಲಿ ಐಎಸ್‌ ಸಂಘಟನೆಯ ಧ್ವಜ, ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ಸಾಧನಗಳು ಪತ್ತೆಯಾಗಿವೆ. ಹೀಗಾಗಿ, ಈ ದಾಳಿಯನ್ನು ಭಯೋತ್ಪಾದನಾ ಸಂಚು ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಂಕಿತನೊಂದಿಗೆ ನಡೆಸಿದ ಗುಂಡಿನ ಚಕಮಕಿ ವೇಳೆ ಇಬ್ಬರು ಅಧಿಕಾರಿಗಳೂ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಅನ್ನೆ ಕಿರ್ಕ್‌ಪ್ಯಾಟ್ರಿಕ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.