ADVERTISEMENT

ನೈಜರ್‌ನಲ್ಲಿ ಭಯೋತ್ಪಾದಕ ದಾಳಿ | ಇಬ್ಬರು ಭಾರತೀಯರ ಹತ್ಯೆ, ಓರ್ವನ ಅಪಹರಣ​

ಪಿಟಿಐ
Published 19 ಜುಲೈ 2025, 11:21 IST
Last Updated 19 ಜುಲೈ 2025, 11:21 IST
ಭಯೋತ್ಪಾದಕ
ಭಯೋತ್ಪಾದಕ   

(ಸಾಂದರ್ಭಿಕ ಚಿತ್ರ)

ನಿಯಾಮಿ: ನೈಋತ್ಯ ನೈಜರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ ಮತ್ತು ಓರ್ವನನ್ನು ಅಪಹರಿಸಲಾಗಿದೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಜುಲೈ 15 ರಂದು ನೈಜರ್‌ನ ಡೊಸೊ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ ಎಂದು ರಾಯಭಾರ ಕಚೇರಿ ಶುಕ್ರವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ADVERTISEMENT

ರಾಜಧಾನಿ ನಿಯಾಮಿಯಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ಡೊಸೊದಲ್ಲಿ ನಿರ್ಮಾಣ ಸ್ಥಳವೊಂದಕ್ಕೆ ಕಾವಲಿದ್ದ ಸೇನಾ ತುಕಡಿಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೃತದೇಹಗಳನ್ನು ಭಾರತಕ್ಕೆ ತರುವ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅಪಹರಣಗೊಂಡಿರುವ ವ್ಯಕ್ತಿಯ ಸುರಕ್ಷಿತ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಅಲ್ಲದೇ, ನೈಜರ್‌ನಲ್ಲಿರುವ ಭಾರತೀಯರಿಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.