ADVERTISEMENT

ಥಾಯ್ಲೆಂಡ್‌: ಮುಳುಗಿದ ಯುದ್ಧನೌಕೆ, 31 ಜನರಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 13:43 IST
Last Updated 19 ಡಿಸೆಂಬರ್ 2022, 13:43 IST
ಥಾಯ್ಲೆಂಡ್‌ ಕರಾವಳಿಯಲ್ಲಿ ಮುಳುಗಿದ ಯುದ್ಧನೌಕೆಯಲ್ಲಿದ್ದ ಜನರ ರಕ್ಷಣಾ ಕಾರ್ಯಾಚಣೆ –ಎಎಫ್‌ಪಿ ಚಿತ್ರ
ಥಾಯ್ಲೆಂಡ್‌ ಕರಾವಳಿಯಲ್ಲಿ ಮುಳುಗಿದ ಯುದ್ಧನೌಕೆಯಲ್ಲಿದ್ದ ಜನರ ರಕ್ಷಣಾ ಕಾರ್ಯಾಚಣೆ –ಎಎಫ್‌ಪಿ ಚಿತ್ರ   

ಬ್ಯಾಂಕಾಕ್‌: ಥಾಯ್ಲೆಂಡ್‌ನ ಎಚ್‌ಟಿಎಂಎಸ್‌ ಸುಖೋಥಾಯ್‌ ಹೆಸರಿನ ಯುದ್ಧ ನೌಕೆಯು ಭಾನುವಾರ ಮಧ್ಯರಾತ್ರಿ ಇಲ್ಲಿಯ ಬಾಂಗ್‌ ಸಫನ್‌ ಪಿಯೆರ್ ಕರಾವಳಿಯಲ್ಲಿ ಮುಳುಗಿದ್ದು, ಅದರಲ್ಲಿದ್ದ 75 ಜನರನ್ನು ಸೋಮವಾರ ಮಧ್ಯಾಹ್ನದ ವೇಳೆಗೆ ರಕ್ಷಿಸಲಾಗಿದೆ. ಇನ್ನೂ 31 ಜನರು ಕಾಣೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ನೌಕಾಪಡೆ ತಿಳಿಸಿದೆ.

ಅಲೆಗಳು ರಭಸದಿಂದ ಅಪ್ಪಳಿಸಿದ್ದೇ ನೌಕೆ ಮುಳುಗಲು ಕಾರಣ ಎಂದು ಹೇಳಲಾಗಿದೆ ನೌಕಾಪಡೆಯ ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿ ಶೋಧಕಾರ್ಯ ನಡೆಸಲಾಗಿದೆ. ಸಮುದ್ರದಲ್ಲಿ ಅಲೆಗಳ ರಭಸ ಜೋರಾಗಿದ್ದು, ಸಣ್ಣ ದೋಣಿಗಳನ್ನು ಶೋಧಕಾರ್ಯಕ್ಕೆ ಬಳಸಲು ಸಾಧ್ಯವಿಲ್ಲ ಎಂದು ಥಾಯ್ಲೆಂಡ್‌ ನೌಕಾಪಡೆ ತಿಳಿಸಿದೆ.

ನೌಕೆಯಲ್ಲಿದ್ದ ಎಲ್ಲರನ್ನೂ ರಕ್ಷಿಸುವುದು ನಮ್ಮ ಮೊದಲನೇ ಆದ್ಯತೆ. ಬಳಿಕವೇ ನೌಕೆಯನ್ನು ದಡಕ್ಕೆ ತರಲಾಗುವುದು ಎಂದು ಅಲ್ಲಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.