ADVERTISEMENT

Covid-19 World Update: ಅಮೆರಿಕದಲ್ಲಿ 46,321 ಹೊಸ ಪ್ರಕರಣ, 532 ಮಂದಿ ಸಾವು

ಏಜೆನ್ಸೀಸ್
Published 4 ಆಗಸ್ಟ್ 2020, 17:03 IST
Last Updated 4 ಆಗಸ್ಟ್ 2020, 17:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 432 ಹೊಸ ಪ್ರಕರಣಗಳು ವರದಿ ಆಗಿದ್ದು ಸೋಂಕಿತರ ಸಂಖ್ಯೆ2,80,460 ಆಗಿದೆ. 15 ಮಂದಿ ಮಂಗಳವಾರ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇಲ್ಲಿಯವರೆಗೆ 249397 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು 1,013 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಅಮೆರಿಕದಲ್ಲಿ ಒಂದೇ ದಿನ 46,321ಹೊಸ ಪ್ರಕರಣಗಳು ವರದಿ ಆಗಿದ್ದು,532 ಮಂದಿ ಮೃತಪಟ್ಟಿದ್ದಾರೆ.

ಜಾಗತಿಕವಾಗಿ 216 ದೇಶಗಳಲ್ಲಿ ಕೊರೊನಾ ವೈರಸ್‌ ಹರಡಿದ್ದು ಭಾರತದಲ್ಲಿ ಸತತ 6ನೇ ದಿನವೂ ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ.

ADVERTISEMENT

ಭಾರತದಲ್ಲಿ ಸೋಂಕಿತರ ಪ್ರಮಾಣ 18 ಲಕ್ಷ ಗಡಿ ದಾಟಿದ್ದು ಸಾವಿನ ಸಂಖ್ಯೆ 38 ಸಾವಿರ ತಲುಪಿದೆ. ಲ್ಯಾಟಿನ್‌ ಅಮೆರಿಕ ಭಾಗದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ಸೋಂಕಿತರಸಂಖ್ಯೆ 50 ಲಕ್ಷದ ಗಡಿ ದಾಟಿದೆ.

ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1,83,40,451 ಆಗಿದೆ. ಇಲ್ಲಿಯವರೆಗೆ 6,95,318 ಮಂದಿ ಸಾವಿಗೀಡಾಗಿದ್ದಾರೆ. 1,16,65,214 ಸೋಂಕಿತರ ಗುಣಮುಖರಾಗಿದ್ದಾರೆ.

ಸೋಂಕಿನ ಪ್ರಮಾಣದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು ಇಲ್ಲಿಯವರೆಗೂ 4,727,879 ಮಂದಿ ಸೋಂಕಿತರಿದ್ದು ಸಾವಿನ ಸಂಖ್ಯೆ 155,814ಕ್ಕೇರಿದೆ.

ಬ್ರೆಜಿಲ್‌ನಲ್ಲಿ 27,50,318 ಸೋಂಕಿತರಿದ್ದು ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. 18,55,745 ಸೋಂಕಿತರಿರು ಭಾರತ ಮೂರನೇ ಸ್ಥಾನದಲ್ಲಿದೆ. ಉಳಿದಂತೆ ರಷ್ಯಾ ( 854,641) ನಾಲ್ಕನೇ ಸ್ಥಾನ, ದಕ್ಷಿಣ ಆಫ್ರಿಕಾ ( 516,862) 5 ನೇ ಸ್ಥಾನದಲ್ಲಿವೆ.
ಉಳಿದಂತೆ ಮೆಕ್ಸಿಕೊದಲ್ಲಿ 439,046, ಪೆರುವಿನಲ್ಲಿ 428,850 ಪ್ರಕರಣಗಳು ದಾಖಲಾಗಿವೆ.

ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ತಗಲಿದರೆ ಅವರಿಗೆ 15 ದಿನ ರಜೆ ನೀಡಿ ವಿಶೇಷ ಭತ್ಯೆ ನೀಡುವ ಯೋಜನೆಯನ್ನು ಆಸ್ಟ್ರೇಲಿಯಾ ಸರ್ಕಾರ ಘೋಷಣೆ ಮಾಡಿದೆ.

ಬ್ರಿಟನ್‌ನಲ್ಲಿ ಸಾವಿನ ಸಂಖ್ಯೆ 48 ಸಾವಿರ ದಾಟಿದೆ. ಬ್ರಿಟನ್‌ ಸರ್ಕಾರ ಹೆಚ್ಚು ಪ್ರಮಾಣದಲ್ಲಿ ತಪಾಸಣೆ ನಡೆಸಲು ಆದ್ಯತೆ ನೀಡಿದೆ. ಕೇವಲ 90 ನಿಮಿಷಗಳಲ್ಲಿ ಪರೀಕ್ಷೆಯ ವರದಿ ನೀಡುವಂತಹ ನೂತನ ಯೋಜನೆಗೆ ಚಾಲನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.