ADVERTISEMENT

ನ್ಯೂಯಾರ್ಕ್: ಪ್ರಾಣಿಗಳಲ್ಲೂ ಕೊರೊನಾ, ಸೋಂಕಿತನಿಂದ ಝೂ ಹುಲಿಗೆ ತಗುಲಿದ ಸೋಂಕು

ಏಜೆನ್ಸೀಸ್
Published 6 ಏಪ್ರಿಲ್ 2020, 2:49 IST
Last Updated 6 ಏಪ್ರಿಲ್ 2020, 2:49 IST
ಸೋಂಕು ತಗುಲಿರುವ ಹುಲಿ
ಸೋಂಕು ತಗುಲಿರುವ ಹುಲಿ   

ನ್ಯೂಯಾರ್ಕ್ (ಯುಎಸ್ಎ)(ಎಎನ್ಐ): ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಆರೈಕೆ ಮಾಡುತ್ತಿದ್ದ ಹುಲಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಇಲ್ಲಿನ ಬ್ರಾಂಕ್ಸ್ಪ್ರಾಣಿ ಸಂಗ್ರಹಾಲಯದಲ್ಲಿ ವರದಿಯಾಗಿದೆ.

ನಾಲ್ಕು ವರ್ಷದ ಹುಲಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬೆಳವಣಿಗೆ ಅಪರೂಪದ್ದಾಗಿದ್ದು, ಕೊರೊನಾ ಸೋಂಕಿತರು ಆದಷ್ಟು ಸಾಕು ಪ್ರಾಣಿಗಳಿಂದಲೂ ದೂರ ಇರುವಂತೆ ಪ್ರಾಣಿಸಂಗ್ರಹಾಲಯದ ಅಧಿಕಾರಿಗಳುಎಚ್ಚರಿಕೆ ನೀಡಿದ್ದಾರೆ.

ಅಮೆರಿಕಾದಲ್ಲಿ ಕೊರೊನಾ ಸೋಂಕು ಕಾರಣ ಮಾರ್ಚ್ 16ರಿಂದ ಈ ಪ್ರಾಣಿಸಂಗ್ರಹಾಲಯವನ್ನು ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಿ ಬಂದ್ ಮಾಡಲಾಗಿದೆ. ಆದರೆ, ಕೊರೊನಾ ಸೋಂಕಿತ ವ್ಯಕ್ತಿಈ ಹೆಣ್ಣು ಹುಲಿಗೆ ಆಹಾರ ಕೊಡುವುದು ಹಾಗೂ ಇತರೆ ಕೆಲಸ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ADVERTISEMENT

ಮೂರು ಆಫ್ರಿಕನ್ ಸಿಂಹಗಳು, ಇತರೆ ಮೂರು ಹುಲಿಗಳಲ್ಲಿಯೂ ಕೆಮ್ಮು ಕಾಣಿಸಿಕೊಂಡಿದೆ. ಕೂಡಲೆ ವೈದ್ಯರುಪರೀಕ್ಷೆ ನಡೆಸಲಾಗಿದ್ದು, ಹೆಣ್ಣು ಹುಲಿ ಹೊರತುಪಡಿಸಿ ಉಳಿದ ಪ್ರಾಣಿಗಳಲ್ಲಿ ಕೆಮ್ಮು ಮಾತ್ರವೇ ಇದ್ದುಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮಿನಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಾಣಿ ಸಂಗ್ರಹಾಲಯದ ಉಸ್ತುವಾರಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಾಣಿಗಳನ್ನು ಹೊರತುಪಡಿಸಿ ಇಲ್ಲಿರುವ ಬೇರೆ ಯಾವುದೇ ಪ್ರಾಣಿಗಳಲ್ಲೂ ಈ ಸೋಂಕುಕಂಡು ಬಂದಿಲ್ಲ.ಈ ಘಟನೆಯನ್ನು ಹೊರತುಪಡಿಸಿ ಇತರೆ ಪ್ರಾಣಿಗಳು ವೈದ್ಯರ ಆರೈಕೆಯಲ್ಲಿ ಉತ್ತಮ ಆರೋಗ್ಯ ಹೊಂದಿವೆ. ಇವು ಉತ್ತಮ ಚಟುವಟಿಕೆಯಿಂದ ಕೂಡಿದ್ದು, ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿಗಳ ಜೊತೆ ಉತ್ತಮ ಒಡನಾಟ ಹೊಂದಿವೆ.

ಕೊರೊನಾ ಸೋಂಕು ಪ್ರಾಣಿಗಳಲ್ಲಿ ಹೇಗೆ ತಗುಲಿತು ಎಂಬುದು ತಿಳಿಯದಾಗಿದೆ. ವೈದ್ಯರ ತಂಡ ಹಾಗೂ ಸಂಶೋಧಕರು ಈ ಪ್ರಾಣಿಗಳ ಆರೋಗ್ಯದ ಕುರಿತು ತೀವ್ರ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಅಲ್ಲದೆ, ಪ್ರಾಣಿಗಳ ಆರೋಗ್ಯದ ಚೇತರಿಕೆ ಕಡೆ ಗಮನ ಹರಿಸಲಾಗುತ್ತಿದೆ. ಈ ಸೋಂಕು ಯಾವ ರೀತಿ ಯಾರಿಗೆ ಹರಡುತ್ತದೆ ಎಂಬುದರ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಯದ ಕಾರಣ ಸೋಂಕಿತರು ಸಾಧ್ಯವಾದಷ್ಟು ಸಾಕು ಪ್ರಾಣಿಗಳಿಂದ ದೂರ ಇರಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.