ADVERTISEMENT

ಟಿಕ್‌ಟಾಕ್ ನಿಷೇಧ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಮೊರೆ

ಕಂಪನಿಯ ಅಮೆರಿಕ ನೌಕರರ ನಿರ್ಧಾರ

ಏಜೆನ್ಸೀಸ್
Published 14 ಆಗಸ್ಟ್ 2020, 6:10 IST
Last Updated 14 ಆಗಸ್ಟ್ 2020, 6:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಜನಪ್ರಿಯ ವಿಡಿಯೊ ಅಪ್ಲಿಕೇಷನ್‌ ಟಿಕ್‌ಟಾಕ್‌ ಅನ್ನು ನಿಷೇಧಿಸಿರುವ ಕ್ರಮವನ್ನು ಪ್ರಶ್ನಿಸಿ, ಟಿಕ್‌ಟಾಕ್‌ ಕಂಪನಿಯ ಅಮೆರಿಕದ ನೌಕರರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದು ಈ ನೌಕರರ ಪರ ವಕಾಲತ್ತು ವಹಿಸಲಿರುವ ವಕೀಲರೊಬ್ಬರು ತಿಳಿಸಿದ್ದಾರೆ.

ಈ ನಿಷೇಧದ ಆದೇಶವು ಅಸಂವಿಧಾನಿಕ ಎಂಬುದು ಆ ವಕೀಲರ ಪ್ರತಿಪಾದನೆಯಾಗಿದೆ.

ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ಬೆದರಿಕೆಯ ಕಾರಣಗಳಿಂದ, ಕಳೆದ ವಾರ ಚೀನಾ ಮೂಲದ ಟಿಕ್‌ಟಾಕ್ ಅಪ್ಲಿಕೇಷನ್ ಮತ್ತು ಮೆಸೇಜಿಂಗ್ ಅಪ್ಲಿಕೇಷನ್‌ ವಿ–ಚಾಟ್‌ ಅನ್ನು ಟ್ರಂಪ್‌ ಆಡಳಿತ ನಿಷೇಧಿಸಿ ಆದೇಶ ಹೊರಡಿಸಿತ್ತು.ಸ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.