ವಾಷಿಂಗ್ಟನ್: ಎಚ್–1ಬಿ ವೀಸಾ ಹೊಂದಿರುವವರ ಪತ್ನಿಗೆ ಕೆಲಸಕ್ಕೆ ಅವಕಾಶ ಕಲ್ಪಿಸುವುದಕ್ಕೆ ತಡೆನೀಡಬಾರದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕದ ಕೋರ್ಟ್‌ಗೆ ಕೋರಿದೆ.
ಇದರಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಅಸಂಖ್ಯ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ.
ಕೆಲ ನಿರ್ದಿಷ್ಟ ವೃತ್ತಿಗೆ ಸಂಬಂಧಿಸಿ ಎಚ್–1ಬಿ ವೀಸಾ ಹೊಂದಿರುವವರ ಪತ್ನಿಗೂ ಕೆಲಸ ಮಾಡಲು ಅವಕಾಶ ಕಲ್ಪಿಸಿ ಈ ಹಿಂದೆ ಒಬಾಮಾ ವೀಸಾ ನೀಡಲು ಆದೇ ಶಿಸಿತ್ತು.
ಎಚ್–1ಬಿ ವೀಸಾ ಹೊಂದಿ ರುವವರ ಪತ್ನಿ, 21 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಎಚ್–4 ವೀಸಾ ಅನ್ನು ಅಮೆರಿಕ ನೀಡುತ್ತಿದೆ.
ಹೀಗೆ ವೀಸಾ ಪಡೆದಿರುವ ಹೆಚ್ಚಿನವರು ಐ.ಟಿ. ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಐ.ಟಿ ಸಂಸ್ಥೆಗಳ ಉದ್ಯೋಗಿಗಳು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.