ADVERTISEMENT

ಭಾರತದ ಸರಕುಗಳ ಮೇಲೆ ಶೇ 25ರಷ್ಟು ಸುಂಕ, ಆಗಸ್ಟ್‌ 1ರಿಂದಲೇ ಜಾರಿ: ಟ್ರಂಪ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2025, 13:40 IST
Last Updated 30 ಜುಲೈ 2025, 13:40 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   

ವಾಷಿಂಗ್ಟನ್‌: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಆಗಸ್ಟ್ 1 ರಿಂದ ಶೇ 25 ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಈ ಕುರಿತು ತಮ್ಮದೇ ಒಡೆತನದ ‘ಟ್ರುತ್’ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.

ADVERTISEMENT

‘ಭಾರತ ನಮ್ಮ ಸ್ನೇಹಿತನಾಗಿದ್ದರೂ ಅವರೊಂದಿಗೆ ನಾವು ವ್ಯವಹಾರ ಮಾಡಿರುವುದು ಕಡಿಮೆಯೇ. ಅಮೆರಿಕದ ಸರಕುಗಳ ಮೇಲೆ ಅವರು(ಭಾರತ) ಅಧಿಕ ಸುಂಕ ವಿಧಿಸಿರುವುದೇ ಅದಕ್ಕೆ ಕಾರಣವಾಗಿದೆ. ಎಲ್ಲ ದೇಶಗಳಿಗೆ ಹೋಲಿಸಿದರೆ ಅವರದ್ದು ಅಧಿಕ ಸುಂಕವಾಗಿದೆ’ ಎಂದು ತಿಳಿಸಿದ್ದಾರೆ.

‘ಉಕ್ರೇನ್‌ನಲ್ಲಿ ನಡೆಯುತ್ತಿರುವ ಹತ್ಯೆಯನ್ನು ರಷ್ಯಾವು ನಿಲ್ಲಿಸಬೇಕು ಎಂದು ಜಗತ್ತು ಆಗ್ರಹಿಸುತ್ತಿರುವಾಗ ಭಾರತವು ರಷ್ಯಾದಿಂದ ಇಂಧನ ಖರೀದಿಸುತ್ತಿದೆ. ಇದು ಒಳ್ಳೆಯದಲ್ಲ... ಆದ್ದರಿಂದ ಆಗಸ್ಟ್‌ 1ರಿಂದ ಜಾರಿಯಾಗುವಂತೆ ಭಾರತಕ್ಕೆ ಶೇ 25ರಷ್ಟು ಸುಂಕ ವಿಧಿಸಲಾಗಿದೆ’ ಎಂದು ಹೇಳಿದ್ದಾರೆ.

ಅಲ್ಲದೇ ತನ್ನ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸಿದ್ದಕ್ಕಾಗಿ ಭಾರತ ದಂಡವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.