ADVERTISEMENT

ವೀಸಾ ವಿವಾದ: ಎಲಾನ್‌ ಮಸ್ಕ್ ಪರ ನಿಂತ ಡೊನಾಲ್ಡ್‌ ಟ್ರಂಪ್

ಎಪಿ
Published 29 ಡಿಸೆಂಬರ್ 2024, 13:35 IST
Last Updated 29 ಡಿಸೆಂಬರ್ 2024, 13:35 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವೆಸ್ಟ್ ಪಾಲ್ಮ್ ಬೀಚ್(ಅಮೆರಿಕ): ವಲಸೆ ವೀಸಾದ ಕುರಿತಾಗಿ ಚರ್ಚೆ ನಡೆಯುತ್ತಿದ್ದು, ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್‌ ಟ್ರಂಪ್ ಅವರು ಎಲಾನ್‌ ಮಸ್ಕ್‌ ಮತ್ತು ಇತರ ಟೆಕ್‌ ಉದ್ಯಮಿಗಳ ಪರವಾಗಿ ಮಾತನಾಡಿದ್ದಾರೆ.

ವಲಸೆ ಮತ್ತು ವೀಸಾದ ಬಗ್ಗೆ ಸಾಮಜಿಕ ಮಾಧ್ಯಮದಲ್ಲಿ ನಡೆದ ಚರ್ಚೆಯಲ್ಲಿ ತಂತ್ರಜ್ಞಾನ ಉದ್ಯಮಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಟ್ರಂಪ್‌ ಬೆಂಬಲಿಗರು ಎಲಾನ್‌ ಮಸ್ಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ಟ್ರಂಪ್ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

‘ನ್ಯೂಯಾರ್ಕ್‌ ಪೋಸ್ಟ್‌’ಗೆ ಶನಿವಾರ ಸಂದರ್ಶನ ನೀಡಿದ ಟ್ರಂಪ್, ‘ಪ್ರತಿಭಾವಂತ ವಿದೇಶಿಗರನ್ನು ಅಮೆರಿಕಕ್ಕೆ ಕರೆತರಲು ವೀಸಾ ನೆರವಾಗಿದೆ’ ಎಂದು ಶ್ಲಾಘಿಸಿದ್ದಾರೆ.

ADVERTISEMENT

‘ನಾನು ಯಾವಾಗಲೂ ವೀಸಾ ನೀಡುವ ಕ್ರಮವನ್ನು ಮೆಚ್ಚಿಕೊಳ್ಳುತ್ತೇನೆ, ಅದರ ಪರವಾಗಿ ಇರುತ್ತೇನೆ’ ಎಂದು ಹೇಳಿದ್ದಾರೆ.

ವಾಸ್ತವವಾಗಿ, ಟ್ರಂಪ್ ಈ ಹಿಂದೆ ಎಚ್‌–1ಬಿ ವೀಸಾವನ್ನು ಕಟುವಾಗಿ ಟೀಕಿಸಿದ್ದರು. ಅಮೆರಿಕದ ಉದ್ಯೋಗಿಗಳ ಪಾಲಿಗೆ ಅದು ತುಂಬಾ ಕೆಟ್ಟದ್ದು ಮತ್ತು ನ್ಯಾಯಯುತವಲ್ಲದ್ದು ಎಂದು ಹೇಳಿದ್ದರು.

ಅಮೆರಿಕಕ್ಕೆ ವಲಸೆ ಬಂದು ಅಕ್ರಮವಾಗಿ ನೆಲಸಿರುವವರನ್ನು ಟ್ರಂಪ್ ವಿರೋಧಿಸುತ್ತಿದ್ದರು. ಈ ವಿಚಾರವು ಅವರ ಚುನಾವಣಾ ಪ್ರಚಾರದ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.