ADVERTISEMENT

ಗಾಜಾ ಪ್ರದೇಶ ಸ್ವಚ್ಛಗೊಳಿಸಲು ಟ್ರಂಪ್ ಪ್ರಸ್ತಾವ

ಏಜೆನ್ಸೀಸ್
Published 26 ಜನವರಿ 2025, 14:19 IST
Last Updated 26 ಜನವರಿ 2025, 14:19 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   

ಗಾಜಾ ಪಟ್ಟಿ: ಗಾಜಾ ಪ್ರದೇಶವನ್ನು ‘ಸ್ವಚ್ಛಗೊಳಿಸಲು’ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯೋಜನೆಯೊಂದನ್ನು ಪ್ರಸ್ತಾಪಿಸಿದ್ದಾರೆ.

ಈಜಿಪ್ಟ್‌ ಮತ್ತು ಜೋರ್ಡನ್ ದೇಶಗಳು ಈ ಪ್ರದೇಶದಲ್ಲಿ ಇರುವ ಪ್ಯಾಲೆಸ್ಟೀನ್‌ ನಾಗರಿಕರನ್ನು ತಮ್ಮ ದೇಶಕ್ಕೆ ಬಿಟ್ಟುಕೊಳ್ಳಬೇಕು ಎಂದು ಟ್ರಂಪ್ ಹೇಳಿದ್ದಾರೆ.

ADVERTISEMENT

ಪ್ಯಾಲೆಸ್ಟೀನ್‌ ನಾಗರಿಕರನ್ನು ಗಾಜಾ ಪಟ್ಟಿಯಿಂದ ಹೊರಗೆ ಒಯ್ಯುವ ಬಗ್ಗೆ ತಾವು ಜೋರ್ಡನ್‌ನ ರಾಜ ಎರಡನೆಯ ಅಬ್ದುಲ್ಲಾ ಜೊತೆ ಮಾತನಾಡಿರುವುದಾಗಿ ಟ್ರಂಪ್ ಹೇಳಿದ್ದಾರೆ. ‘ಈಜಿಪ್ಟ್‌ ಕೂಡ ಜನರನ್ನು ತನ್ನಲ್ಲಿ ಸೇರಿಸಿಕೊಳ್ಳಬೇಕು. ಜೋರ್ಡನ್ ಕೂಡ ಹೀಗೆ ಮಾಡಬೇಕು’ ಎಂದು ಟ್ರಂಪ್ ಅವರು ಸುದ್ದಿಗಾರರ ಬಳಿ ಹೇಳಿದ್ದಾರೆ.

ಪ್ಯಾಲೆಸ್ಟೀನ್‌ ನಾಗರಿಕರನ್ನು ಗಾಜಾ ಪ್ರದೇಶದಿಂದ ಒತ್ತಾಯಪೂರ್ವಕವಾಗಿ ಹೊರಗೆ ಕಳುಹಿಸುವುದನ್ನು ಈಜಿಪ್ಟ್‌ ಈ ಹಿಂದೆಯೇ ವಿರೋಧಿಸಿದೆ. ವಿಶ್ವಸಂಸ್ಥೆಯ ದಾಖಲೆಗಳ ಪ್ರಕಾರ ಜೋರ್ಡನ್‌ನಲ್ಲಿ 23 ಲಕ್ಷ ಪ್ಯಾಲೆಸ್ಟೀನ್‌ ನಿರಾಶ್ರಿತರು ಈಗಾಗಲೇ ಇದ್ದಾರೆ.

‘ಕೆಲವು ಅರಬ್ ದೇಶಗಳ ಜೊತೆ ನಾನು ಮಾತುಕತೆ ನಡೆಸುವೆ. ಅವರು (ಪ್ಯಾಲೆಸ್ಟೀನ್ ಜನ) ಶಾಂತಿಯಿಂದ ಇರುವ ರೀತಿಯಲ್ಲಿ ಬೇರೆಡೆ ಮನೆಗಳನ್ನು ನಿರ್ಮಿಸಲಾಗುತ್ತದೆ’ ಎಂದು ಟ್ರಂಪ್ ಹೇಳಿದ್ದಾರೆ. ಗಾಜಾದ ಜನರನ್ನು ಹೊರಗಡೆ ಕರೆದೊಯ್ಯುವುದು ತಾತ್ಕಾಲಿಕವಾಗಿರಬಹುದು ಅಥವಾ ದೀರ್ಘಾವಧಿಗೆ ಕೂಡ ಆಗಿರಬಹುದು ಎಂದು ತಿಳಿಸಿದ್ದಾರೆ.

ಗಾಜಾದಲ್ಲಿ ಯುದ್ಧ ಆರಂಭವಾದ ನಂತರದಲ್ಲಿ ಗಾಜಾದ ಬಹುತೇಕ ಜನರನ್ನು ಹಲವು ಬಾರಿ ಸ್ಥಳಾಂತರಿಸಲಾಗಿದೆ. ಟ್ರಂಪ್‌ ನೇತೃತ್ವದ ಆಡಳಿತವು ಇಸ್ರೇಲ್‌ಗೆ ತನ್ನ ಬೆಂಬಲವನ್ನು ಈಗಾಗಲೇ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.