
ಲಂಡನ್: ‘ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ (ಫೆಡ್) ಮುಖ್ಯಸ್ಥ ಜೆರೋಮ್ ಪೋವೆಲ್ ಅವರ ಅಧಿಕಾರಾವಧಿ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಆ ಸ್ಥಾನಕ್ಕೆ ಮಾಜಿ ಗವರ್ನರ್ ಕೆವಿನ್ ವಾರ್ಷ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ತಿಳಿಸಿದ್ದಾರೆ.
ಮುಖ್ಯಸ್ಥರ ನಾಮನಿರ್ದೇಶನ ಪ್ರಕ್ರಿಯೆಯು ತಿಂಗಳುಗಳ ಕಾಲ ನಡೆಯುತ್ತದೆ. ವಾರ್ಷ್, ಶ್ವೇತಭವನದ ಆರ್ಥಿಕ ಸಲಹೆಗಾರ ಕೆವಿನ್ ಹ್ಯಾಸೆಟ್, ಫೆಡ್ ಗವರ್ನರ್ ಕ್ರಿಸ್ಟೋಫರ್ ವಾಲರ್, ಷೇರು ಮಾರುಕಟ್ಟೆ ತಜ್ಞ ರಿಕ್ ರೀಡರ್ ಅವರು ತಮ್ಮ ಅರ್ಹತೆ ಮತ್ತು ಆರ್ಥಿಕ ನೀತಿಗಳ ಕುರಿತು ಟಿ.ವಿ ಕಾರ್ಯಕ್ರಮಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ.
ಡಾಲರ್ ಮೌಲ್ಯವು ಆರಂಭಿಕ ಏರಿಕೆಯ ನಂತರ ತುಸು ಇಳಿಕೆಯಾಗಿದೆ. ಅಮೆರಿಕದ ಟ್ರೆಜರಿ ಬಾಂಡ್ ಬಡ್ಡಿದರ ಹೆಚ್ಚಾಗಿದ್ದು, ವಾಲ್ ಸ್ಟ್ರೀಟ್‌ನ (ಷೇರು ಮಾರುಕಟ್ಟೆ) ವಹಿವಾಟು ಕುಸಿತಗೊಳ್ಳುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.