ADVERTISEMENT

ಸೋಲೊಪ್ಪದ ಟ್ರಂಪ್‌; ಮುಜುಗರ ತಂದಿದೆ ಎಂದ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆ

ಪಿಟಿಐ
Published 11 ನವೆಂಬರ್ 2020, 7:10 IST
Last Updated 11 ನವೆಂಬರ್ 2020, 7:10 IST
ಜೊ ಬೈಡನ್
ಜೊ ಬೈಡನ್   

ವಾಷಿಂಗ್ಟಮ್‌: ‘‌‌ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಸೋತರೂ, ಆ ಸೋಲನ್ನು ಒಪ್ಪಿಕೊಳ್ಳದಿರುವುದು ನನಗೆ ತೀವ್ರ ಮುಜುಗರ ಉಂಟು ಮಾಡುತ್ತಿದೆ‘ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೊ ಬೈಡನ್ ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಾನು ಹೊರ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಆರಂಭಿಸಿದ್ದೇನೆ. ಟ್ರಂಪ್‌ ಅವರ ನಡವಳಿಕೆಯು ಈ ಯಾವ ಪ್ರಕ್ರಿಯೆ ಮೇಲೂ ಪರಿಣಾಮ ಬೀರುವುದಿಲ್ಲ‘ ಎಂದು ಸ್ಪಷ್ಟಪಡಿಸಿದ್ದಾರೆ.

‘ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ನಾನು ಭಾವಿಸುತ್ತೇನೆ. ಇದರಿಂದ ಅಧ್ಯಕ್ಷರ ಪರಂಪರೆಗೆ ಯಾವುದೇ ರೀತಿ ಸಹಾಯವಾಗುವುದಿಲ್ಲ. ನಾನು ಈಗಾಗಲೇ ಹೊರದೇಶದ ನಾಯಕರೊಂದಿಗೆ ನಡೆಸಿದ ಚರ್ಚೆಗಳಿಂದ ಇವೆಲ್ಲವನ್ನೂ ಅರಿತುಕೊಂಡಿದ್ದೇನೆ. ಅವರೆಲ್ಲ ಅಮೆರಿಕದಲ್ಲಿ ಮತ್ತೊಮ್ಮೆ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ನಡೆಯುವ ಚಟುವಟಿಕೆಗಳನ್ನು ಕಾಣುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ‘ ಎಂದು ಬೈಡನ್ ಡೆಲವಾರೆಯಲ್ಲಿನ ವಿಲ್ಮಿಂಗ್ಟನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಟ್ರಂಪ್ ಸೋಲನ್ನು ಒಪ್ಪಿಕೊಳ್ಳದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೈಡನ್, ‘ಜನವರಿ 20ರಂದು ಇದಕ್ಕೆ ಉತ್ತರ ಸಿಗಲಿದೆ‘ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.