
ಪ್ರಜಾವಾಣಿ ವಾರ್ತೆ
ವಾಷಿಂಗ್ಟನ್: ಕಾಫಿ, ದನದ ಮಾಂಸ, ಉಷ್ಣವಲಯದ ಹಣ್ಣುಗಳು ಮತ್ತು ಇತರ ಸರಕುಗಳ ಮೇಲಿನ ಸುಂಕವನ್ನು ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ದಿನಬಳಕೆಯ ವಸ್ತುಗಳ ಬೆಲೆ ಏರಿಕಯಾಗುತ್ತಿರುವುದನ್ನು ನಿಯಂತ್ರಿಸುವಂತೆ ಉಂಟಾಗುತ್ತಿದ್ದ ಆಂತರಿಕ ಒತ್ತಡದ ಕಾರಣಕ್ಕೆ ಈ ಬೆಳವಣಿಗೆ ನಡೆದಿದೆ.
ದೇಶಿ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಆರ್ಥಿಕತೆಗೆ ವೇಗ ನೀಡುವುದಕ್ಕಾಗಿ ಅಮೆರಿಕ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಟ್ರಂಪ್ ಅವರು ಭಾರಿ ಪ್ರಮಾಣದ ಸುಂಕ ವಿಧಿಸಿದ್ದರು.
‘ಕಾಫಿಯಂತಹ ಕೆಲ ಪದಾರ್ಥಗಳ ಮೇಲಿನ ಸುಂಕದಲ್ಲಿ ಸ್ವಲ್ಪ ವಿನಾಯಿತಿಯನ್ನು ನೀಡುತ್ತೇವೆ’ ಎಂದು ಟ್ರಂಪ್ ಏರ್‌ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.