ADVERTISEMENT

ಐರೋಪ್ಯ ಒಕ್ಕೂಟದ ಮೇಲೆ ಶೇ 50ರಷ್ಟು ಸುಂಕ; ಗಡುವು ವಿಸ್ತರಣೆಗೆ ಟ್ರಂಪ್‌ ಒಪ್ಪಿಗೆ

ಪಿಟಿಐ
Published 26 ಮೇ 2025, 2:35 IST
Last Updated 26 ಮೇ 2025, 2:35 IST
   

ವಾಷಿಂಗ್ಟನ್‌: ಐರೋಪ್ಯ ಒಕ್ಕೂಟದ ಆಮದು ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸುವ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆದಿರುವ ಟ್ರಂಪ್‌ ಆಡಳಿತ, ಜುಲೈ 9ರವರೆಗೆ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.

ಜೂನ್‌ 1ರಿಂದ ಐರೋಪ್ಯ ಒಕ್ಕೂಟದ 27 ದೇಶಗಳ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಹೇಳಿದ್ದರು. ಐರೋ‌ಪ್ಯ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗಿನ ಮಾತುಕತೆಯ ನಂತರ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

‘ಉರ್ಸುಲಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಸುಂಕ ಜಾರಿ ಮಾಡುವ ಜೂನ್‌ 1ರ ಗಡುವನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ನಾನು ಒಪ್ಪಿಕೊಂಡಿದ್ದು, ಜುಲೈ 9ರವರೆಗೆ ವಿಸ್ತರಣೆ ಮಾಡಲಾಗಿದೆ’ ಎಂದು ಟ್ರಂಪ್‌ ಅವರು ತಮ್ಮ ಟ್ರುತ್ ಸೋಷಿಯಲ್‌ ವೇದಿಕೆಯಲ್ಲಿ ತಿಳಿಸಿದ್ದಾರೆ.‌‌

ADVERTISEMENT

‘ಮಾತುಕತೆಯನ್ನು ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಮುಂದುವರಿಸಲು ಐರೋಪ್ಯ ಒಕ್ಕೂಟ ಸಿದ್ಧವಾಗಿದೆ. ಉತ್ತಮ ನಿರ್ಧಾರಕ್ಕೆ ಬರಲು ಜುಲೈ 9ರವರೆಗೆ ನಮಗೆ ಸಮಯ ಬೇಕಿದೆ’ ಎಂದು ಉರ್ಸುಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.