ADVERTISEMENT

ನಿರುದ್ಯೋಗ ಬಿಕ್ಕಟ್ಟು: ಪ್ಯಾಕೇಜ್‌ ಇಲ್ಲ ಎಂದ ಟ್ರಂಪ್

ಏಜೆನ್ಸೀಸ್
Published 9 ಮೇ 2020, 16:06 IST
Last Updated 9 ಮೇ 2020, 16:06 IST
   

ವಾಷಿಂಗ್ಟನ್‌: ಅಮೆರಿಕದಲ್ಲಿ ತಕ್ಷಣಕ್ಕೆ ಆರ್ಥಿಕ ಪುನಶ್ಚೇತನಕ್ಕಾಗಿ ಯಾವುದೇ ಪ್ಯಾಕೇಜ್‌ ಘೋಷಿಸುವ ಉದ್ದೇಶ ಇಲ್ಲ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಉಂಟಾದ ಆರ್ಥಿಕ ಕುಸಿತದಿಂದಾಗಿ ಅಮೆರಿಕದಲ್ಲಿ ಕಳೆದ ತಿಂಗಳೊಂದರಲ್ಲಿಯೇ 2 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸರ್ಕಾರ ವರದಿ ಮಾಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ರಿಪಬ್ಲಿಕ್‌ ಸದಸ್ಯರೊಂದಿಗೆ ನಡೆಸಿದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರ ಜತೆ ಈ ಕುರಿತು ಮಾತನಾಡಿದ ಟ್ರಂಪ್, ಯಾವುದೇ ಅವಸರ ಇಲ್ಲ ಎಂದು ಹೇಳಿದ್ದಾರೆ.

ADVERTISEMENT

ಇದೇ ಮೊದಲು:ಜಾಗತಿಕ ಆರ್ಥಿಕ ಕುಸಿತದ ಬಳಿಕ ಅಮೆರಿಕದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ನಿರುದ್ಯೋಗ ಉಂಟಾಗಿರುವುದು ಇದೇ ಮೊದಲು ಎಂದು ಡೆಮಾಕ್ರಟಿಕ್‌ ನಾಯಕ ಚಕ್ ಶುಮರ್‌ ಹೇಳಿದ್ದಾರೆ. ಅಮೆರಿಕದ ಉದ್ಯೋಗಿಗಳು ಹಾಗೂ ಅವರ ಕುಟುಂಬದವರಿಗೆ ಬೆಂಬಲ ನೀಡಲು ದಿಟ್ಟವಾದ ಕ್ರಮ ಕೈಗೊಳ್ಳುವವರ ಅವಶ್ಯಕತೆ ಇದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.