ADVERTISEMENT

ತೆರಿಗೆದಾರರ ಹಣ ಪೋಲಾಗುವುದು ಸೇರಿದಂತೆ ಹಲವು ಕಾರ್ಯಕಾರಿ ಆದೇಶಗಳಿಗೆ ಟ್ರಂಪ್ ಸಹಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 12:33 IST
Last Updated 20 ಫೆಬ್ರುವರಿ 2025, 12:33 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಕ್ರಮ ವಲಸೆಯನ್ನು ಬೆಂಬಲಿಸುವುದಕ್ಕೆ ತೆರಿಗೆದಾರರ ಹಣ ಪೋಲಾಗುವುದನ್ನು ತಡೆಯುವುದು ಸೇರಿದಂತೆ ಹಲವು ಕಾರ್ಯಕಾರಿ ಆದೇಶಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಬುಧವಾರ ಸಹಿ ಹಾಕಿದ್ದಾರೆ.

ಸರ್ಕಾರದ ಹಣ ವಲಸಿಗರಿಗಾಗಿ ಅಕ್ರಮವಾಗಿ ಬಳಕೆಯಾಗುವುದನ್ನೂ ಈ ಆದೇಶವು ತಡೆಯುತ್ತದೆ. ವಲಸಿಗರಾಗಿ ಯಾವುದೇ ಸರ್ಕಾರಿ ಅನುದಾನಿತ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದರೆ, ಅವುಗಳನ್ನು ಗುರುತಿಸಿ ಪಟ್ಟಿ ಮಾಡುವಂತೆಯೂ ಸಂಬಂಧಪಟ್ಟ ಏಜೆನ್ಸಿಗಳಿಗೆ ನಿರ್ದೇಶಿಸಲಾಗಿದೆ.

ರಾಜ್ಯಗಳು ಅಥವಾ ಸ್ಥಳೀಯ ಸಂಸ್ಥೆಗಳು ಇನ್ನು ಮುಂದೆ ಅಕ್ರಮ ವಲಸಿಗರಿಗೆ ಸರ್ಕಾರದ ಹಣ ಬಳಸುವುದಿಲ್ಲ ಎಂಬುದನ್ನು ಈ ಆದೇಶವು ಖಚಿತಪಡಿಸುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.