ADVERTISEMENT

ಸೋಮಾಲಿಯಾ ದೇಶದ ವಲಸಿಗರು ಕಸವಿದ್ದಂತೆ: ಡೊನಾಲ್ಡ್ ಟ್ರಂಪ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 13:59 IST
Last Updated 5 ಡಿಸೆಂಬರ್ 2025, 13:59 IST
<div class="paragraphs"><p>ಡೊನಾಲ್ಡ್ ಟ್ರಂಪ್‌</p></div>

ಡೊನಾಲ್ಡ್ ಟ್ರಂಪ್‌

   

ನ್ಯೂಯಾರ್ಕ್‌: ‘ಅಮೆರಿಕದಲ್ಲಿರುವ ಸೋಮಾಲಿಯಾ ದೇಶದ ವಲಸಿಗರು ಕಸ ಇದ್ದಂತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಈ ಹೇಳಿಕೆಯನ್ನು ಅವರು ಏಳು ಸೆಕೆಂಡ್‌ನಲ್ಲಿ ಮೂರು ಬಾರಿ ಪುನರುಚ್ಚರಿಸಿದ್ದಾರೆ.

ADVERTISEMENT

ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶಕ್ಕೆ ಅವರು ಬೇಕಿಲ್ಲ’ ಎಂದು ಅಕ್ರಮ ವಲಸಿಗರ ವಿರುದ್ಧ ವಾಗ್ದಾಳಿ ನಡೆಸಿದರು.

‘ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೇ ಹೋಗಲಿ’ ಎಂದು ಹೇಳಿದರು. ಟ್ರಂಪ್ ಅವರ ಮಾತಿಗೆ ಸಂಪುಟ ಸದಸ್ಯರು ಕರತಾಡನದ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಮುಷ್ಠಿಯನ್ನು ಬಿಗಿಹಿಡಿದು ಸಂತಸದ ಸನ್ನೆ ಮಾಡಿದರು. ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗ್‌ಸೆಥ್‌ ಅವರು ‘ಸರಿಯಾಗಿ ಹೇಳಿದಿರಿ’ ಎಂದರು.

ಟ್ರಂಪ್‌ ಅವರು ವಲಸಿಗರ ವಿರುದ್ಧ ಮಾತಿನ ಪ್ರಹಾರ ನಡೆಸುತ್ತಿರುವುದು ಇದೇ ಮೊದಲೇನಲ್ಲ. ದಶಕದ ಹಿಂದೆ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಸಂದರ್ಭದಲ್ಲಿಯೂ ‘ಮೆಕ್ಸಿಕೊ ಅತ್ಯಾಚಾರಿಗಳನ್ನು ಅಮೆರಿಕದ ಒಳಗೆ ಕಳುಹಿಸುತ್ತಿದೆ’ ಎಂದು ಕಟುವಾಗಿ ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.