ADVERTISEMENT

ಟರ್ಕಿ, ಸಿರಿಯಾ: ಭೂಕಂಪಕ್ಕೆ 20,450 ಸಾವು

ಏಜೆನ್ಸೀಸ್
Published 9 ಫೆಬ್ರುವರಿ 2023, 21:30 IST
Last Updated 9 ಫೆಬ್ರುವರಿ 2023, 21:30 IST
   

ಟರ್ಕಿ (ಎಪಿ): ದಶಕದ ಅತ್ಯಂತ ಭೀಕರ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ ದಿನ ಕಳೆದಂತೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಗುರುವಾರ ಮೃತರ ಸಂಖ್ಯೆ 20,450ಕ್ಕೆ ತಲುಪಿದೆ.

ಕಾಣೆಯಾದವರಿಗೆ ಶೋಧ ನಡೆಯುತ್ತಿದೆ. ನಾಲ್ಕು ದಿನಗಳ ಹಿಂದೆ ರಿಕ್ಟರ್‌ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದ ಸಾವಿರಾರು ಮನೆಗಳು, ಕಟ್ಟಡಗಳು ಧರೆಗುರುಳಿವೆ. ಭೂಕಂ‍ಪ
ದಿಂದ ನಲುಗಿದ ನಗರಗಳಲ್ಲಿ ಅವಶೇಷಗಳ ತೆರವು, ಬದುಕುಳಿದವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ.

ಟರ್ಕಿಗೆ ಪ್ರವಾಸ ಹೋಗಿದ್ದ ಭಾರತದ ಉತ್ತರಾಖಂಡದ ನಿವಾಸಿ ವಿಜಯ್‌ಕುಮಾರ್‌ ಗೌಡ್‌ ಎಂಬುವರು ಕಾಣೆಯಾಗಿದ್ದಾರೆ. ಅವರುಉಳಿದಿದ್ದ ಹೋಟೆಲ್‌, ಭೂಕಂಪದಿಂದ ಕುಸಿದಿದೆ. ಅವರ ಮೊಬೈಲ್‌ ರಿಂಗಣಿಸುತ್ತಿದೆ. ಆದರೆ, ಕರೆ ಸ್ವೀಕರಿಸುತ್ತಿಲ್ಲವೆಂದು ಅವರ ಕುಟುಂಬದವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.