ಏರ್‌ಶೋಗೆ ಅಭ್ಯಾಸ ನಡೆಸುವ ವೇಳೆ ಆಗಸದಲ್ಲಿ ಡಿಕ್ಕಿಯಾದ ಜೆಟ್ ವಿಮಾನಗಳು
ಪ್ಯಾರಿಸ್: ಫ್ರಾನ್ಸ್ ಏರ್ ಶೋಗೆ ಪೂರ್ವಾಭ್ಯಾಸ ನಡೆಸುವ ವೇಳೆ ಫ್ರೆಂಚ್ ವಾಯು ಸೇನೆಯ ಎರಡು ಜೆಟ್ ವಿಮಾನಗಳು ಆಕಾಶದಲ್ಲಿ ಡಿಕ್ಕಿ ಹೊಡೆದುಕೊಂಡ ಘಟನೆ ಫ್ರಾನ್ಸ್‌ನ ವಾಯ ನೆಲೆಯಲ್ಲಿ ನಡೆದಿದೆ.
ಪೂರ್ವ ಫ್ರಾನ್ಸ್‌ನ ಸೇಂಟ್ ಡಿಜಿಯರ್ ವಾಯು ನೆಲೆಯಲ್ಲಿ ಆರು ಆಲ್ಫಾ ಜೆಟ್‌ಗಳು ಆಕಾಶದಲ್ಲಿ ಅಭ್ಯಾಸ ನಡೆಸುತ್ತಿದ್ದವು. ಈ ವೇಳೆ ಜೆಟ್‌ಗಳು ಕೆಳಮುಖವಾಗಿ ಬರುವಾಗ ಕೊನೆಯಲ್ಲಿದ್ದ ಎರಡು ಜೆಟ್‌ಗಳ ನಡುವೆ ಡಿಕ್ಕಿಯಾಗಿದೆ.
ಜೆಟ್‌ಗಳು ಡಿಕ್ಕಿಯಾಗಿ ಕೆಳಕ್ಕೆ ಬಿದ್ದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಪತನವಾದ ಎರಡೂ ಜೆಟ್‌ಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಜೆಟ್‌ಗಳು ಕೆಳಕ್ಕೆ ಬಿದ್ದಾಗ ಪೈಲಟ್ ಮತ್ತು ಜೊತೆಗಿದ್ದ ಸಿಬ್ಬಂದಿ ಪ್ರಜ್ಞಾವಸ್ಥೆಯಲ್ಲಿಯೇ ಇದ್ದರು, ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫ್ರಾನ್ಸ್ ವಾಯು ಸೇನೆ ಹೇಳಿರುವುದಾಗಿ ವರದಿಯಾಗಿದೆ.
ಫ್ರಾನ್ಸ್‌ನ ಸೇನಾ ಸಚಿವ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡು ಅಪಘಾತದ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.