ADVERTISEMENT

ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ನಾಪತ್ತೆ

ಏಜೆನ್ಸೀಸ್
Published 15 ಜೂನ್ 2020, 8:04 IST
Last Updated 15 ಜೂನ್ 2020, 8:04 IST
   

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಇಂದು ಬೆಳಗ್ಗೆಯಿಂದ, ಕರ್ತವ್ಯದಲ್ಲಿರುವಾಗಿನಿಂದಲೇ ಅವರು ನಾಪತ್ತೆಯಾಗಿದ್ದಾರೆ.ವಿಚಾರವನ್ನು ವಿದೇಶಾಂಗ ಇಲಾಖೆ ಪರಿಗಣನೆಗೆ ತೆಗೆದುಕೊಂಡಿದೆ.

ಸಿಬ್ಬಂದಿ ನಾಪತ್ತೆಯಾಗಿರುವ ಕುರಿತುಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ADVERTISEMENT

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ರಾಜತಾಂತ್ರಿಕ ಅಧಿಕಾರಿಗಳ ಕಾರು ಹಿಂಬಾಲಿಸಿದ್ದ ಗುಪ್ತಚರ ಇಲಾಖೆ ಸಿಬ್ಬಂದಿ

ಭಾರತದ ರಾಜತಾಂತ್ರಿಕ ಅಧಿಕಾರಿ ಗೌರವ್ ಅಹ್ಲುವಾಲಿಯಾ ಅವರ ಕಾರನ್ನು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಗುಪ್ತಚರ ಇಲಾಖೆ (ಐಎಸ್‌ಐ) ಸದಸ್ಯರು ಹಿಂಬಾಲಿಸಿದ್ದರು. ಭಾರತದ ರಾಜತಾಂತ್ರಿಕ ಅಧಿಕಾರಗಳ ನಿವಾಸದ ಹೊರಗೆ ಹಾಗೂ ಸಂಚರಿಸುವ ಮಾರ್ಗದಲ್ಲಿ ಪಾಕಿಸ್ತಾನದ ಗುಪ್ತಚರ ಇಲಾಖೆ ತನ್ನ ಸಿಬ್ಬಂದಿಯನ್ನು ಕಾರು ಮತ್ತು ಬೈಕ್‌ಗಳಲ್ಲಿ ನಿಯೋಜಿಸುತ್ತಿದ್ದ ಬಗ್ಗೆ ಸುದ್ದಿಯಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೊ ಕೂಡ ಬಿಡುಗಡೆಯಾಗಿತ್ತು.

ಪತ್ರ ಬರೆದಿದ್ದ ಭಾರತದ ರಾಯಭಾರ ಕಚೇರಿ

ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪಾಕಿಸ್ತಾನದ ಏಜೆನ್ಸಿಗಳು ನಿರಂತರವಾಗಿ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಪಾಕಿಸ್ತಾನದ ಭಾರತೀಯ ಹೈಕಮಿಷನ್ ಇಸ್ಲಾಮಾಬಾದ್‌ನ ವಿದೇಶಾಂಗ ಸಚಿವಾಲಯಕ್ಕೆ ಮಾರ್ಚ್‌ನಲ್ಲಿ ಪ್ರತಿಭಟನಾ ಟಿಪ್ಪಣಿಯನ್ನು ರವಾನಿಸಿತ್ತು.
ಅಧಿಕಾರಿಗಳಿಗೆ ಕಿರುಕುಳ ನೀಡಿದ 13 ಪ್ರಸಂಗಗಳನ್ನು ಉಲ್ಲೇಖಿಸಿ ಭಾರತವು ಪಾಕಿಸ್ತಾನಕ್ಕೆ ಪತ್ರ ಬರೆದಿತ್ತು. ಅಲ್ಲದೆ, ಈ ಎಲ್ಲ ಪ್ರಕರಣಗಳ ತನಿಖೆಗೆ ಒತ್ತಾಯಿಸಿತ್ತು ಎನ್ನಲಾಗಿದೆ.

ಹೀಗಿರುವಾಗಲೇ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.